ಬೆಂಗಳೂರಿನಲ್ಲಿದ್ದೀರಿ..! ವೀಕೆಂಡ್ ಒಂದೊಳ್ಳೆ ಸ್ಥಳಕ್ಕೆ ಹೋಗಬೇಕು ಅಂತಾ ನೀವೇನಾದರೂ ಪ್ಲಾನ್ ಮಾಡಿದ್ದರೆ ರಾಜಧಾನಿಯಿಂದ ಜಸ್ಟ್ 65 ಕಿ.ಮೀದೂರದಲ್ಲಿರುವ ಮಂದರಗಿರಿ ನಿಮಗೆ ಒಳ್ಳೆಯ ಆಯ್ಕೆ.
ಜೈನರ ಪವಿತ್ರ ಕ್ಷೇತ್ರವಾದ ತುಮಕೂರಿನ ಪಂಡಿತರಹಳ್ಳಿ ಗ್ರಾಮದಲ್ಲಿದೆ. ಇಲ್ಲಿರುವ ದಿಗಂಬರ ಚಂದ್ರನಾಥ ತೀರ್ಥಂಕರರ ಮೂರ್ತಿಯನ್ನ ಕಣ್ತುಂಬಿಕೊಳ್ಳೋಕೆ ಎರಡು ಕಣ್ಣು ಸಾಲದು. ಈ ಮಂದಿರವನ್ನ 2011ರಲ್ಲಿ ಉದ್ಘಾಟನೆ ಮಾಡಲಾಗಿದೆ.
ಇನ್ನು ಇಡೀ ಪ್ರವಾಸಿ ತಾಣದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಂದರೆ ನವಿಲು ಗರಿಗಳ ಮಂದಿರ. ದಿಗಂಬರ ಜೈನರು ಬಳಕೆ ಮಾಡುವ ನವಿಲುಗರಿಯ ಬೀಸಣಿಕೆಯ ಆಕಾರದಲ್ಲಿ ಈ ಮಂದಿರ ಮೂಡಿ ಬಂದಿದೆ. 81 ಅಡಿ ಎತ್ತರವಿರುವ ಈ ಮಂದಿರ ಆಚಾರ್ಯ ದಿಗಂಬರ ಜೈನ ಚಕ್ರವರ್ತಿ ಶ್ರೀಶಾಂತಿ ಸಾಗರ ಮಹಾರಾಜ್ರಿಗೆ ಸೇರಿದ್ದಾಗಿದೆ.
ಇನ್ನು ಈ ಪ್ರವಾಸಿ ತಾಣದಿಂದ ಸ್ವಲ್ಪವೇ ದೂರದಲ್ಲಿ ನಿಮಗೆ ಬಸ್ತಿ ಬೆಟ್ಟ ಕಾಣಸಿಗಲಿದೆ. ಇದೊಂದು ಏಕಶಿಲಾ ಬೆಟ್ಟವಾಗಿದ್ದು ಇದರ ಮೇಲೆ ಜೈನ ಮಂದಿರಗಳಿವೆ. 918 ಅಡಿ ಎತ್ತರದ ಈ ಶಿಲೆಯನ್ನ ಹತ್ತಬೇಕು ಅಂದರೆ ನೀವು ಬರೋಬ್ಬರಿ 435 ಬೆಟ್ಟಗಳನ್ನ ಏರಬೇಕು.