alex Certify ವೀಕೆಂಡ್​ಗೊಂದು ಅದ್ಭುತ ಪ್ರವಾಸಿ ತಾಣ ಈ ಜೈನ ಮಂದಿರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೀಕೆಂಡ್​ಗೊಂದು ಅದ್ಭುತ ಪ್ರವಾಸಿ ತಾಣ ಈ ಜೈನ ಮಂದಿರ….!

ಬೆಂಗಳೂರಿನಲ್ಲಿದ್ದೀರಿ..! ವೀಕೆಂಡ್​ ಒಂದೊಳ್ಳೆ ಸ್ಥಳಕ್ಕೆ ಹೋಗಬೇಕು ಅಂತಾ ನೀವೇನಾದರೂ ಪ್ಲಾನ್​ ಮಾಡಿದ್ದರೆ ರಾಜಧಾನಿಯಿಂದ ಜಸ್ಟ್​ 65 ಕಿ.ಮೀದೂರದಲ್ಲಿರುವ ಮಂದರಗಿರಿ ನಿಮಗೆ ಒಳ್ಳೆಯ ಆಯ್ಕೆ.

ಜೈನರ ಪವಿತ್ರ ಕ್ಷೇತ್ರವಾದ ತುಮಕೂರಿನ ಪಂಡಿತರಹಳ್ಳಿ ಗ್ರಾಮದಲ್ಲಿದೆ. ಇಲ್ಲಿರುವ ದಿಗಂಬರ ಚಂದ್ರನಾಥ ತೀರ್ಥಂಕರರ ಮೂರ್ತಿಯನ್ನ ಕಣ್ತುಂಬಿಕೊಳ್ಳೋಕೆ ಎರಡು ಕಣ್ಣು ಸಾಲದು. ಈ ಮಂದಿರವನ್ನ 2011ರಲ್ಲಿ ಉದ್ಘಾಟನೆ ಮಾಡಲಾಗಿದೆ.

ಇನ್ನು ಇಡೀ ಪ್ರವಾಸಿ ತಾಣದ ಸೆಂಟರ್​ ಆಫ್​ ಅಟ್ರ್ಯಾಕ್ಷನ್​ ಅಂದರೆ ನವಿಲು ಗರಿಗಳ ಮಂದಿರ. ದಿಗಂಬರ ಜೈನರು ಬಳಕೆ ಮಾಡುವ ನವಿಲುಗರಿಯ ಬೀಸಣಿಕೆಯ ಆಕಾರದಲ್ಲಿ ಈ ಮಂದಿರ ಮೂಡಿ ಬಂದಿದೆ. 81 ಅಡಿ ಎತ್ತರವಿರುವ ಈ ಮಂದಿರ ಆಚಾರ್ಯ ದಿಗಂಬರ ಜೈನ ಚಕ್ರವರ್ತಿ ಶ್ರೀಶಾಂತಿ ಸಾಗರ ಮಹಾರಾಜ್​​ರಿಗೆ ಸೇರಿದ್ದಾಗಿದೆ.

ಇನ್ನು ಈ ಪ್ರವಾಸಿ ತಾಣದಿಂದ ಸ್ವಲ್ಪವೇ ದೂರದಲ್ಲಿ ನಿಮಗೆ ಬಸ್ತಿ ಬೆಟ್ಟ ಕಾಣಸಿಗಲಿದೆ. ಇದೊಂದು ಏಕಶಿಲಾ ಬೆಟ್ಟವಾಗಿದ್ದು ಇದರ ಮೇಲೆ ಜೈನ ಮಂದಿರಗಳಿವೆ. 918 ಅಡಿ ಎತ್ತರದ ಈ ಶಿಲೆಯನ್ನ ಹತ್ತಬೇಕು ಅಂದರೆ ನೀವು ಬರೋಬ್ಬರಿ 435 ಬೆಟ್ಟಗಳನ್ನ ಏರಬೇಕು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...