alex Certify ಶಾಲೆ ಆರಂಭದ ಚರ್ಚೆ ವೇಳೆಯಲ್ಲೇ ಶಾಕಿಂಗ್ ನ್ಯೂಸ್: 8 ಶಿಕ್ಷಕರಿಗೆ ಕೊರೋನಾ ಪಾಸಿಟಿವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆ ಆರಂಭದ ಚರ್ಚೆ ವೇಳೆಯಲ್ಲೇ ಶಾಕಿಂಗ್ ನ್ಯೂಸ್: 8 ಶಿಕ್ಷಕರಿಗೆ ಕೊರೋನಾ ಪಾಸಿಟಿವ್

ಧಾರವಾಡದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ 8 ಮಂದಿ ಶಿಕ್ಷಕರಿಗೆ ಕೊರೊನಾ ಸೋಂಕು ತಗಲಿದೆ. ನಿನ್ನೆ ಒಂದೇ ದಿನ 7 ಮಂದಿ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಶಾಲೆ ಪುನರಾರಂಭದ ಪರ, ವಿರೋಧದ ಚರ್ಚೆ ನಡೆದಿರುವ ಹೊತ್ತಲ್ಲೇ ಆಘಾತಕಾರಿ ವರದಿ ಹೊರ ಬಿದ್ದಿದೆ. ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರಿಗೆ ಮೂರು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಈ ಮೂಲಕ 8 ಶಿಕ್ಷಕರಿಗೆ ಸೋಂಕು ತಗಲಿದೆ ಎಂದು ಹೇಳಲಾಗಿದೆ.

ಧಾರವಾಡದ ಪ್ರತಿಷ್ಠಿತ ಶಾಲೆ ಇದಾಗಿದ್ದು ಶಾಲೆ ಆರಂಭದ ಬಗ್ಗೆ ಜೂನ್ 6ರಂದು ಪೂರ್ವಭಾವಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕಿಯಿಂದ ಉಳಿದ 7 ಮಂದಿ ಶಿಕ್ಷಕರಿಗೆ ಸೋಂಕು ತಗಲಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...