ಕೋವಿಡ್ ಸೋಂಕು ಆರಂಭವಾದಾಗಿನಿಂದ ಜನರಿಗೆ ವೈದ್ಯಕೀಯ ಸೌಲಭ್ಯಗಳ ದರ ಗಗನಕ್ಕೇರಿದೆ. ಕೋವಿಡ್ ರಿಪೋರ್ಟ್ ಬಂದ ಬಳಿಕ ಬಹುತೇಕ ರೋಗಿಗಳಿಗೆ ಸಿಟಿ ಸ್ಕ್ಯಾನ್ ನಡೆಸುವಂತೆ ಸೂಚನೆ ನೀಡಲಾಗುತ್ತೆ. ಆದರೆ ಖಾಸಗಿ ಲ್ಯಾಬ್ಗಳಲ್ಲಿ ಸಿಟಿ ಸ್ಕ್ಯಾನ್ ನಡೆಸಲು 7000 ರಿಂದ 10000 ರೂಪಾಯಿಗಳವರೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಈ ಸಂಬಂಧ ಸಾಕಷ್ಟು ದೂರುಗಳನ್ನ ಸ್ವೀಕರಿಸಿದ ರಾಜ್ಯ ಸರ್ಕಾರ ಇದೀಗ ಇಂತಹ ಲ್ಯಾಬ್ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಸಿಟಿ ಸ್ಕ್ಯಾನ್ ಹಗಲು ದರೋಡೆಗೆ ಕಡಿವಾಣ ಹಾಕಿರುವ ರಾಜ್ಯ ಸರ್ಕಾರ ಪ್ರತಿ ಸಿಟಿ ಸ್ಕ್ಯಾನ್ 1500 ರೂಪಾಯಿಯನ್ನ ಮಾತ್ರ ಪಡೆಯಬೇಕು ಎಂದು ಆದೇಶ ಪ್ರಕಟಿಸಿದೆ. ಸರ್ಕಾರದ ಆದೇಶದ ಹೊರತಾಗಿಯೂ ಹೆಚ್ಚಿನ ದರ ತೆಗೆದುಕೊಳ್ಳುತ್ತಿರೋದು ಕಂಡುಬಂದಲ್ಲಿ ಅಂತಹ ಆಸ್ಪತ್ರೆ ಲ್ಯಾಬ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಖಡಕ್ ವಾರ್ನಿಂಗ್ ನೀಡಿದೆ.
ಕರ್ನಾಟಕಕ್ಕೆ ಆಕ್ಸಿಜನ್ ರಿಲೀಫ್..! ರಾಜ್ಯಕ್ಕೆ 1200 ಮೆ.ಟನ್ ಆಮ್ಲಜನಕ ಪೂರೈಸುವಂತೆ ಸುಪ್ರೀಂ ಆದೇಶ
ಕೊರೊನಾ ಲಕ್ಷಣಗಳನ್ನ ಹೊಂದಿದ ಬಳಿಕವೂ ಆರ್ಟಿ ಪಿಸಿಆರ್ ಟೆಸ್ಟ್ನಲ್ಲಿ ಕೆಲವರ ಕೊರೊನಾ ವರದಿ ನೆಗೆಟಿವ್ ಬರುತ್ತೆ. ಇಂತಹ ಸಂದರ್ಭದಲ್ಲಿ ವೈದ್ಯರು ಸಾಮಾನ್ಯವಾಗಿ ಸಿಟಿ ಸ್ಕ್ಯಾನ್ ಮಾಡಿಸುವಂತೆ ಸಲಹೆಯನ್ನ ನೀಡುತ್ತಾರೆ. ಆದರೆ ಇದೇ ಪರಿಸ್ಥಿತಿಯ ಲಾಭ ಪಡೆದಿರುವ ಕೆಲ ಖಾಸಗಿ ಲ್ಯಾಬ್ಗಳು ಹಗಲು ದರೋಡೆಗೆ ಮುಂದಾಗಿದ್ದವು.