alex Certify BIG BREAKING: ರಾಜ್ಯದಲ್ಲಿ ಕೊರೋನಾ ಸ್ಪೋಟ, ರಾಯಚೂರು 83 ಸೇರಿ ಒಂದೇ ದಿನ ದಾಖಲೆಯ 299 ಮಂದಿಗೆ ಪಾಸಿಟಿವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ರಾಜ್ಯದಲ್ಲಿ ಕೊರೋನಾ ಸ್ಪೋಟ, ರಾಯಚೂರು 83 ಸೇರಿ ಒಂದೇ ದಿನ ದಾಖಲೆಯ 299 ಮಂದಿಗೆ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 299 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು ಒಟ್ಟು 3221 ಮಂದಿಗೆ ಸೋಂಕು ತಗುಲಿದೆ.

ಇವತ್ತು 221 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಒಟ್ಟು 1218 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋರೋನಾ ಸೋಂಕಿನಿಂದ ಇವತ್ತು ಇಬ್ಬರು ಸಾವನ್ನಪ್ಪಿದ್ದು ಒಟ್ಟು 51 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

15 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವತ್ತು ಪತ್ತೆಯಾದ 299 ಮಂದಿಯಲ್ಲಿ 255 ಜನ ಅಂತರರಾಜ್ಯ ಪ್ರಯಾಣಿಕರಾಗಿದ್ದಾರೆ. 7 ಮಂದಿ ಅಂತರರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.

ಇವತ್ತು ಒಂದೇ ದಿನ ಬೆಂಗಳೂರಿನಲ್ಲಿ 21, ಯಾದಗಿರಿ 44, ಕಲಬುರಗಿ 28, ರಾಯಚೂರು 83, ಬೀದರ್ 33, ಉಡುಪಿ 10, ಮಂಡ್ಯ 13, ದಾವಣಗೆರೆ 6, ದಕ್ಷಿಣಕನ್ನಡ 14, ವಿಜಯಪುರ 26, ಉತ್ತರಕನ್ನಡ 5 ಸೇರಿ 299 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...