alex Certify ಕೊರೊನಾ ಲಸಿಕೆ ಪೂರೈಕೆಯಲ್ಲಿಯೂ ಕೇಂದ್ರದ ಮಲತಾಯಿ ಧೋರಣೆ: ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್​ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಪೂರೈಕೆಯಲ್ಲಿಯೂ ಕೇಂದ್ರದ ಮಲತಾಯಿ ಧೋರಣೆ: ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್​ ಆಕ್ರೋಶ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದ್ದು ಈ ಮೂಲಕ ದೇಶದಲ್ಲೇ ಎರಡನೆ ಅತಿ ಹೆಚ್ಚು ಕೊರೊನಾ ಪ್ರಕರಣವನ್ನ ಕರ್ನಾಟಕ ವರದಿ ಮಾಡುತ್ತಿದೆ. ಈ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದಲ್ಲಿ ಲಸಿಕೆಗೂ ಸಹ ಅಭಾವ ಕಾಣಿಸಿಕೊಂಡಿರೋದು ಮತ್ತೊಂದು ಚಿಂತಾಜನಕ ವಿಚಾರವಾಗಿದೆ.

ಆದರೆ ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಕಂಪನಿಯು ಲಸಿಕೆ ಆದ್ಯತೆಯ ರಾಜ್ಯಗಳ ಬಗ್ಗೆ ಕೇಂದ್ರ ಸರ್ಕಾರ ನೀಡಿರುವ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ದೆಹಲಿ, ಮಹಾರಾಷ್ಟ್ರ ಸೇರಿದಂತೆ 14 ರಾಜ್ಯಗಳ ಹೆಸರಿದ್ದು ಕರ್ನಾಟಕ ಈ ಪಟ್ಟಿಯಿಂದ ಹೊರತಾಗಿದೆ.

ಕೊರೊನಾ ಆತಂಕದಲ್ಲಿರುವವರಿಗೆ ಗುಡ್ ನ್ಯೂಸ್: ನೆಗಡಿ – ಜ್ವರ ಸೇರಿದಂತೆ ಎಲ್ಲ ವೈರಸ್ ಓಡಿಸಲು ನೆರವಾಗುತ್ತೆ ಈ ಕಷಾಯ….!

ಇನ್ನು ಈ ಸಂಬಂಧ ಆಕ್ರೋಶ ಹೊರಹಾಕಿರುವ ರಾಜ್ಯ ಕಾಂಗ್ರೆಸ್​ ಟ್ವಿಟರ್​ನಲ್ಲಿ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದೆ. ಇದು ರಾಜ್ಯ ಸರ್ಕಾರದ ಅಸಾಮರ್ಥ್ಯವೋ …? ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯೋ ಅನ್ನೋದನ್ನ ಸಚಿವ ಆರ್​. ಸುಧಾಕರ್​ ಸ್ಪಷ್ಟಪಡಿಸಬೇಕು. ಕೇಂದ್ರ ಸರ್ಕಾರ ನೀಡಿರುವ ಪಟ್ಟಿಯಲ್ಲಿ ಕರ್ನಾಟಕದ ಹೆಸರು ಏಕಿಲ್ಲ…? ವ್ಯಾಕ್ಸಿನ್​​ಗಾಗಿ ಸರ್ಕಾರ ಬೇಡಿಕೆಯನ್ನೇ ಇಟ್ಟಿಲ್ಲವೇ..? ಇಟ್ಟಿದ್ದರೆ ಕೇಂದ್ರ ವಂಚಿಸಿದೆಯೇ? ವ್ಯವಸ್ಥೆ ಸರಿಪಡಿಸುವ ಎಳೆ ಸಂಸದನೂ ಸೇರಿ 25 ಸಂಸದರು ಎಲ್ಲಿ ಅಡಗಿದ್ದಾರೆ? ಎಂದು ಟ್ವೀಟಾಸ್ತ್ರ ಬಳಕೆ ಮಾಡಿದೆ.

ರಾಜ್ಯದಲ್ಲಿ ನಿನ್ನೆ ಒಂದೇ ದಿನಕ್ಕೆ 39,305 ಮಂದಿ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 32,188ರಷ್ಟಾಗಿದೆ. ರಾಜ್ಯದಲ್ಲಿ ಪ್ರಸ್ತುತ 5,71,006 ಸಕ್ರಿಯ ಕೊರೊನಾ ಪ್ರಕರಣಗಳು ಇವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...