alex Certify ಲಾಕ್ ಡೌನ್ ಮುಗಿದ ನಂತರ SSLC ಪರೀಕ್ಷೆ ಬರೆಯಲು ರೆಡಿಯಾದ ವಿದ್ಯಾರ್ಥಿಗಳಿಗೆ ‘ಸಿಹಿ ಸುದ್ದಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಮುಗಿದ ನಂತರ SSLC ಪರೀಕ್ಷೆ ಬರೆಯಲು ರೆಡಿಯಾದ ವಿದ್ಯಾರ್ಥಿಗಳಿಗೆ ‘ಸಿಹಿ ಸುದ್ದಿ’

ಶಿವಮೊಗ್ಗ: ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆ ತಡೆಗಟ್ಟುವ ಸಲುವಾಗಿ ದೇಶದಾದ್ಯಂತ ಲಾಕ್‍ಡೌನ್ ಮಾಡಿರುವುದರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಮೂಂದೂಡಲಾಗಿದೆ.

ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ರಜೆ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ  ಅಭ್ಯಸಿಸುವಾಗ ವಿಷಯವಾರು ಕಷ್ಟಕರ ವಿಷಯಗಳ ಬಗ್ಗೆ ಸಂದೇಹಗಳು ಮತ್ತು ಗೊಂದಲಗಳನ್ನು ಪರಿಹರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಭದ್ರಾವತಿ ಆಕಾಶವಾಣಿ ವತಿಯಿಂದ ನೇರ ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಿದೆ,  ಕಾರ್ಯಕ್ರಮದ ನಿಗಧಿತ ದಿನಾಂಕಗಳಂದು ಬೆಳಿಗ್ಗೆ 10.30 ರಿಂದ ಮ. 11.30ರ ವರೆಗೆ ಸಂಬಂಧಪಟ್ಟ ವಿಷಯಗಳ ಸಂಪನ್ಮೂಲ ಶಿಕ್ಷಕರ ವೇಳಾಪಟ್ಟಿಯಂತೆ ಹಾಜರಿದ್ದು, ವಿದ್ಯಾರ್ಥಿಗಳು ಪ್ರಶ್ನಿಸುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ಮೇ -04 ರಂದು ಗಣಿತ, ಮೇ-08 ರಂದು ಇಂಗ್ಲೀಷ್, ಮೇ-11 ರಂದು ವಿಜ್ಞಾನ, ಮೇ-15 ರಂದು ಸಮಾಜ ವಿಜ್ಞಾನ, ಮೇ-18 ರಂದು ಹಿಂದಿ ಹಾಗೂ ಮೇ -22 ರಂದು ಕನ್ನಡ ವಿಷಯಗಳ ಕುರಿತು ದೂ.ಸಂ.: 08282-274900 / 270282 ಗಳನ್ನು ಸಂಪರ್ಕಿಸಿ ತಮ್ಮ ಸಂದೇಹಗಳು ಮತ್ತು ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕೆಂದು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...