alex Certify SSLC ಪರೀಕ್ಷೆಯಲ್ಲಿ ಸಾಂದೀಪನಿ ಶಾಲೆಗೆ ಈ ಬಾರಿಯೂ ಶೇ.100 ಫಲಿತಾಂಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SSLC ಪರೀಕ್ಷೆಯಲ್ಲಿ ಸಾಂದೀಪನಿ ಶಾಲೆಗೆ ಈ ಬಾರಿಯೂ ಶೇ.100 ಫಲಿತಾಂಶ

2019 – 20 ನೇ ಸಾಲಿನ10 ನೇ ತರಗತಿ ಫಲಿತಾಂಶ ಸೋಮವಾರದಂದು ಹೊರಬಿದ್ದಿದ್ದು, ಶಿವಮೊಗ್ಗದ ಸಾಂದೀಪನಿ ಆಂಗ್ಲ ಪ್ರೌಢ ಶಾಲೆ ಈ ಬಾರಿಯೂ ಶೇಕಡ 100ರಷ್ಟು ಫಲಿತಾಂಶ ಪಡೆದಿದೆ. 621 ಅಂಕ ಗಳಿಸಿರುವ ರಿಯಾ ಡಿಸೋಜಾ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಬಾರಿ ಸಾಂದೀಪನಿ ಆಂಗ್ಲ ಪ್ರೌಢಶಾಲೆಯ ಒಟ್ಟು 132 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 23 ಅಭ್ಯರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ಪ್ರಥಮ ಭಾಷೆ ಕನ್ನಡ ಆಯ್ಕೆ ಮಾಡಿಕೊಂಡ 6 ವಿದ್ಯಾರ್ಥಿಗಳು 125 ಅಂಕ ಪಡೆದಿದ್ದು, ಸಂಸ್ಕೃತ ಆಯ್ಕೆ ಮಾಡಿಕೊಂಡ 3 ವಿದ್ಯಾರ್ಥಿಗಳು 125 ಅಂಕಗಳನ್ನು ಪಡೆದಿದ್ದಾರೆ.

ಇಂಗ್ಲಿಷ್ ವಿಷಯದಲ್ಲಿ ಮೂವರು, ಕನ್ನಡ ತೃತೀಯ ಭಾಷೆ ಆಯ್ಕೆ ಮಾಡಿಕೊಂಡ 10, ಹಿಂದಿ ವಿಷಯದಲ್ಲಿ 20, ಗಣಿತದಲ್ಲಿ 6 ಹಾಗೂ ಸಮಾಜ ವಿಜ್ಞಾನದಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ. ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...