ಈ ಬಾರಿ ಸಾಂದೀಪನಿ ಆಂಗ್ಲ ಪ್ರೌಢಶಾಲೆಯ ಒಟ್ಟು 132 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 23 ಅಭ್ಯರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ಪ್ರಥಮ ಭಾಷೆ ಕನ್ನಡ ಆಯ್ಕೆ ಮಾಡಿಕೊಂಡ 6 ವಿದ್ಯಾರ್ಥಿಗಳು 125 ಅಂಕ ಪಡೆದಿದ್ದು, ಸಂಸ್ಕೃತ ಆಯ್ಕೆ ಮಾಡಿಕೊಂಡ 3 ವಿದ್ಯಾರ್ಥಿಗಳು 125 ಅಂಕಗಳನ್ನು ಪಡೆದಿದ್ದಾರೆ.
ಇಂಗ್ಲಿಷ್ ವಿಷಯದಲ್ಲಿ ಮೂವರು, ಕನ್ನಡ ತೃತೀಯ ಭಾಷೆ ಆಯ್ಕೆ ಮಾಡಿಕೊಂಡ 10, ಹಿಂದಿ ವಿಷಯದಲ್ಲಿ 20, ಗಣಿತದಲ್ಲಿ 6 ಹಾಗೂ ಸಮಾಜ ವಿಜ್ಞಾನದಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ. ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.