ಬೆಂಗಳೂರು: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್ ಗಳನ್ನು ಮಾಡುವಂತೆ ಕೇಂದ್ರ ಸರ್ಕಾರ ಆದೇಶ ನೀಡಿರುವ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಪ್ರತಿದಿನ ಟಾರ್ಗೆಟ್ ನೀಡುತ್ತಿದ್ದು, ಇದೀಗ ಕೋವಿಡ್ ಟೆಸ್ಟ್ ನಲ್ಲೇ ಆರೋಗ್ಯ ಸಿಬ್ಬಂದಿ ಕಳ್ಳಾಟ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೊರೊನಾ ಟೆಸ್ಟ್ ಗಾಗಿ ವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸುವ ಬದಲು ಖಾಲಿ ಕಡ್ಡಿಯನ್ನು ಲಿಕ್ವಿಡ್ ಬಾಟಲ್ ಗೆ ಹಾಕಿ ಅದನ್ನು ಲ್ಯಾಬ್ ಗೆ ಕಳುಹಿಸುತ್ತಿರುವ ಪ್ರಕರಣ ಬೆಂಗಳೂರಿನ ಯಲಹಂಕ ವಲಯದ ಕೊಡಿಗೆಹಳ್ಳಿ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಬೆಳಕಿಗೆ ಬಂದಿದೆ. ಪಾಲಿಕೆಯ ಆರೋಗ್ಯ ಸಿಬ್ಬಂದಿಗಳ ಕೋವಿಡ್ ಟೆಸ್ಟ್ ಕಳ್ಳಾಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮಂಗನ ಕೈಯಲ್ಲಿ ವಿಡಿಯೋ ಗೇಮ್ ಆಡಿಸಿದ ಎಲಾನ್ ಮಸ್ಕ್..!
ಆರೋಗ್ಯ ಸಿಬ್ಬಂದಿಗಳ ಕೊರೊನಾ ಸ್ಯಾಂಪಲ್ ಟೆಸ್ಟ್ ಕಳ್ಳಾಟಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಈ ಬಗ್ಗೆ ನಮಗೆ ನಿನ್ನೆಯೇ ಗಮನಕ್ಕೆ ಬಂದಿದ್ದು, ಕೊಡಿಗೆಹಳ್ಳಿ ಆರೋಗ್ಯ ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ. ಅಲ್ಲದೇ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
https://www.facebook.com/100000700337007/posts/4182964661736837/?sfnsn=wiwspwawes