alex Certify ನಿರಂತರವಾಗಿ ಸುರಿದ‌ ಅಕಾಲಿಕ ಮಳೆಗೆ ಬೆಚ್ಚಿಬಿದ್ದ ಶಿವಮೊಗ್ಗ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರಂತರವಾಗಿ ಸುರಿದ‌ ಅಕಾಲಿಕ ಮಳೆಗೆ ಬೆಚ್ಚಿಬಿದ್ದ ಶಿವಮೊಗ್ಗ ಜನ…!

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇಂದು ಸಂಜೆಯಿಂದ ಭಾರಿ ಮಳೆಯಾಗಿದ್ದು, ಕೊರೊನಾ ಸಂಕಷ್ಟದ ನಡುವೆ ಸುರಿದ ಈ ಅಕಾಲಿಕ ಮಳೆಗೆ ಶಿವಮೊಗ್ಗದ ಜನತೆ ಬೆಚ್ಚಿಬಿದ್ದಿದ್ದಾರೆ.

ಸಂಜೆ 6.30 ರಿಂದ ನಿರಂತರವಾಗಿ ಮಳೆಯಾಗುತ್ತಿದ್ದು, 8 ಗಂಟೆಯಾದರೂ ಇದು ಕಡಿಮೆಯಾಗಿರಲಿಲ್ಲ. ಅಕಾಲಿಕ ಮಳೆಗೆ ರಸ್ತೆಯ ತುಂಬೆಲ್ಲ ನೀರು ತುಂಬಿಕೊಂಡಿದ್ದು, ಚರಂಡಿಗಳು ತುಂಬಿ ಹರಿಯುತ್ತಿವೆ.

ಮಳೆ ಬರುವ ಯಾವುದೇ ಮುನ್ಸೂಚನೆ ಇರದಿದ್ದರೂ ಸಂಜೆ ಬಳಿಕ ದಿಢೀರನೆ ಮೋಡ ಆವರಿಸಿಕೊಂಡು ನಿರಂತರವಾಗಿ ಮಳೆಯಾಗಿದೆ. ಜನವರಿ ತಿಂಗಳಿನಲ್ಲಿ ಮಳೆಗಾಲವನ್ನು ನೆನಪಿಸುವಂತೆ ಸುರಿದ ಮಳೆಯಿಂದಾಗಿ ಜನತೆ ಅಚ್ಚರಿಗೊಳಗಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...