ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇಂದು ಸಂಜೆಯಿಂದ ಭಾರಿ ಮಳೆಯಾಗಿದ್ದು, ಕೊರೊನಾ ಸಂಕಷ್ಟದ ನಡುವೆ ಸುರಿದ ಈ ಅಕಾಲಿಕ ಮಳೆಗೆ ಶಿವಮೊಗ್ಗದ ಜನತೆ ಬೆಚ್ಚಿಬಿದ್ದಿದ್ದಾರೆ.
ಸಂಜೆ 6.30 ರಿಂದ ನಿರಂತರವಾಗಿ ಮಳೆಯಾಗುತ್ತಿದ್ದು, 8 ಗಂಟೆಯಾದರೂ ಇದು ಕಡಿಮೆಯಾಗಿರಲಿಲ್ಲ. ಅಕಾಲಿಕ ಮಳೆಗೆ ರಸ್ತೆಯ ತುಂಬೆಲ್ಲ ನೀರು ತುಂಬಿಕೊಂಡಿದ್ದು, ಚರಂಡಿಗಳು ತುಂಬಿ ಹರಿಯುತ್ತಿವೆ.
ಮಳೆ ಬರುವ ಯಾವುದೇ ಮುನ್ಸೂಚನೆ ಇರದಿದ್ದರೂ ಸಂಜೆ ಬಳಿಕ ದಿಢೀರನೆ ಮೋಡ ಆವರಿಸಿಕೊಂಡು ನಿರಂತರವಾಗಿ ಮಳೆಯಾಗಿದೆ. ಜನವರಿ ತಿಂಗಳಿನಲ್ಲಿ ಮಳೆಗಾಲವನ್ನು ನೆನಪಿಸುವಂತೆ ಸುರಿದ ಮಳೆಯಿಂದಾಗಿ ಜನತೆ ಅಚ್ಚರಿಗೊಳಗಾಗಿದ್ದಾರೆ.