alex Certify ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ದೃಶ್ಯ

ರಸ್ತೆ ಮಾರ್ಗದಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಇನ್ನೊಂದು ವಾಹನ ಏಕಾ ಏಕಿ ಅಡ್ಡಬಂದ ಪರಿಣಾಮ ಬೈಕ್​ ಸವಾರ ಬೈಕಿನಿಂದ ಹಾರಿದ ಘಟನೆ ಮಂಗಳೂರಿನ ಏರ್​ಪೋರ್ಟ್ ರಸ್ತೆಯಲ್ಲಿ ನಡೆದಿದೆ. ಬೈಕಿಗೆ ಏಕಾ ಏಕಿ ವಾಹನವೊಂದು ಅಡ್ಡ ಬಂದಿದ್ದು ನಿಯಂತ್ರಣ ತಪ್ಪಿದ ಬೈಕ್​ ಸವಾರ ಅಂಗಡಿಗೆ ಡಿಕ್ಕಿ ಹೊಡೆದು ಬಳಿಕ ಬೈಕಿನಿಂದ ಹಾರಿ ರಸ್ತೆ ಮೇಲೆ ಬಿದ್ದಿದ್ದಾನೆ.

ಬೈಕಿನಿಂದ ಹಾರಿಬಿದ್ದ ಯುವಕನನ್ನ 30 ವರ್ಷದ ಪ್ರಶಾಂತ್​ ಎಂದು ಗುರುತಿಸಲಾಗಿದೆ. ಅಪಘಾತದದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಪ್ರಶಾಂತ್​ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಮೃತ ವ್ಯಕ್ತಿ ಖಾಸಗಿ ಕಂಪನಿಯೊಂದರಲ್ಲಿ ಸೂಪರ್​ವೈಸರ್​ ಆಗಿದ್ದರು ಎನ್ನಲಾಗಿದೆ. ವಾಹನದಿಂದ ಅಪಘಾತವಾಗೋದನ್ನ ತಪ್ಪಿಸಲು ಹೋಗಿ ಬೈಕ್​ ಸವಾರ ಈ ರೀತಿ ದುರಂತ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ. ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಘಟನೆ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...