alex Certify ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮತ್ತೆ 2 ತಿಂಗಳ ರೇಷನ್ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮತ್ತೆ 2 ತಿಂಗಳ ರೇಷನ್ ವಿತರಣೆ

ಬೆಂಗಳೂರು: ಲಾಕ್ಡೌನ್ ಜಾರಿಯಾಗಿರುವುದರಿಂದ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಈಗಾಗಲೇ ಎರಡು ತಿಂಗಳ ಪಡಿತರ ಪೂರೈಕೆ ಮಾಡಿರುವ ಸರ್ಕಾರ ಮುಂದಿನ ಎರಡು ತಿಂಗಳ ಅವಧಿಗೆ ಪಡಿತರ ವಿತರಿಸಲು ಸಿದ್ಧತೆ ಕೈಗೊಂಡಿದೆ.

ಜೂನ್ ಮತ್ತು ಜುಲೈ ತಿಂಗಳ ಪಡಿತರ ವಿತರಣೆ ಮೇ ಮೊದಲ ವಾರದಿಂದ ಆರಂಭವಾಗಲಿದೆ. ಮೇ 1 ರಿಂದ ಪಡತರ ವಿತರಣೆ ಮಾಡಲಾಗುವುದು. ಲಾಕ್ ಡೌನ್ ಜಾರಿಯಾದ ನಂತರ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ 2 ತಿಂಗಳ ಪಡಿತರ ವಿತರಣೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಕೂಡ ಪಡಿತರ ವಿತರಿಸಲಾಗಿದೆ.

ಅದೇ ರೀತಿ ಜೂನ್, ಜುಲೈ ತಿಂಗಳ ಪಡಿತರವನ್ನು ಮೊದಲ ವಾರದಿಂದ ವಿತರಿಸಲಾಗುವುದು. ಮೇ 1 ರಿಂದಲೇ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...