alex Certify ಬಿಜೆಪಿಗೆ ಬಿಸಿತುಪ್ಪವಾದ ರಾಜ್ಯಸಭೆ ಟಿಕೆಟ್ ಪೈಪೋಟಿ: ತೇಜಸ್ವಿನಿ ಅನಂತ್ ಕುಮಾರ್ ಸೇರಿ ಇಬ್ಬರಿಗೆ ಚಾನ್ಸ್..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿಗೆ ಬಿಸಿತುಪ್ಪವಾದ ರಾಜ್ಯಸಭೆ ಟಿಕೆಟ್ ಪೈಪೋಟಿ: ತೇಜಸ್ವಿನಿ ಅನಂತ್ ಕುಮಾರ್ ಸೇರಿ ಇಬ್ಬರಿಗೆ ಚಾನ್ಸ್..?

ಜೂನ್ 19 ರಂದು ರಾಜ್ಯಸಭೆ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 4 ಸ್ಥಾನಗಳಲ್ಲಿ ಬಿಜೆಪಿಗೆ 2, ಕಾಂಗ್ರೆಸ್ ಗೆ 1 ಮತ್ತು ಕಾಂಗ್ರೆಸ್ ನೆರವಿನಿಂದ ಜೆಡಿಎಸ್ 1 ಸ್ಥಾನ ಗೆಲ್ಲುವ ಸಾಧ್ಯತೆ ಇದೆ.

ಬಿಜೆಪಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ರಾಜ್ಯ ಬಿಜೆಪಿಯಲ್ಲಿ ರಾಜ್ಯಸಭೆಯ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದ್ದು, ರಮೇಶ್ ಕತ್ತಿ ಟಿಕೆಟ್ ಗಾಗಿ ಭಾರಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

ರಾಜ್ಯಸಭೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿರುವುದು ಬಿಜೆಪಿ ಹೈಕಮಾಂಡ್ ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ರಾಜ್ಯ ಉಸ್ತುವಾರಿ ಮುರಳಿಧರ ರಾವ್ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ರಭಾಕರ ಕೋರೆ ಮತ್ತು ತೇಜಸ್ವಿನಿ ಅನಂತಕುಮಾರ್ ಅವರ ಹೆಸರು ಮುಂಚೂಣಿಯಲ್ಲಿವೆ. 2 ಸ್ಥಾನಕ್ಕೆ ಮೂವರು ಘಟಾನುಘಟಿಗಳ ಹೆಸರು ಮುಂಚೂಣಿಯಲ್ಲಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್, ತೇಜಸ್ವಿನಿ ಅನಂತಕುಮಾರ್, ಪ್ರಭಾಕರ್ ಕೋರೆ, ರಮೇಶ್ ಕತ್ತಿ ಅವರೊಂದಿಗೆ ಇನ್ನೂ ಹಲವರ ಹೆಸರು ಪರಿಗಣನೆಯಲ್ಲಿದ್ದು, ಪ್ರಭಾಕರ ಕೋರೆ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿದರೆ ಇನ್ನೊಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...