alex Certify ರೀಲ್ಸ್​ ಮಾಡುತ್ತಲೇ ರಾತ್ರೋರಾತ್ರಿ ಭಾರತೀಯ ಮೂಲದ ಯುವತಿ ಫೇಮಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೀಲ್ಸ್​ ಮಾಡುತ್ತಲೇ ರಾತ್ರೋರಾತ್ರಿ ಭಾರತೀಯ ಮೂಲದ ಯುವತಿ ಫೇಮಸ್…!

ಟಿಕ್​ಟಾಕ್​​ನ ಬಳಿಕ ಇದೀಗ ಇನ್ಸ್​ಟಾಗ್ರಾಂ ಪ್ರಸ್ತುತ ಪಡಿಸಿರುವ ರೀಲ್ಸ್ ನೆಟ್ಟಿಗರಿಗೆ ಟಿಕ್​ಟಾಕ್​ ರೀತಿಯಲ್ಲೇ ಖುಷಿ ಕೊಡ್ತಿದೆ. ಇದರಲ್ಲಿ ಒಬ್ಬ ಯುವತಿ ಎಷ್ಟು ಫೇಮಸ್​ ಆಗಿದ್ದಾರೆ ಅಂದರೆ ಅವರ ರೀಲ್ಸ್ ವಿಡಿಯೋವನ್ನ ಸ್ವತಃ ಕೇಂದ್ರ ಸಚಿವೆ ಸ್ಮೃತಿ ಇರಾನಿ ಶೇರ್​ ಮಾಡಿದ್ದಾರೆ.

ಇಷ್ಟು ಮಾತ್ರವಲ್ಲದೇ ನೆಟ್​ಫ್ಲಿಕ್ಸ್​ನ ಯುಟ್ಯೂಬ್​ ಶೋ ಬೆಹೆನ್ಸ್​ಪ್ಲೇನಿಂಗ್​​​ನಲ್ಲಿ ಅತಿಥಿ ಪಾತ್ರದಲ್ಲೂ ಈಕೆ ಕಾಣಿಸಿಕೊಂಡಿದ್ದಾರೆ. ಕೇವಲ 2 ತಿಂಗಳಲ್ಲಿ ಈಕೆಯ ಫಾಲೋವರ್ಸ್​ ಸಂಖ್ಯೆ 1 ಮಿಲಿಯನ್​ ದಾಟಿದೆ.

ಅಂದಹಾಗೆ ಈಕೆ ಚೆನ್ನೈ​ ಮೂಲದ ನಿಹಾರಿಕಾ ಎನ್​. ಎಂ. ಇವರು ಇಷ್ಟು ಬೇಗ ಫೇಮಸ್​ ಆಗೋಕೆ ಕಾರಣ ಇವರ ಮಾತಿನ ಧಾಟಿ. ಕ್ಯಾಲಿಫೋರ್ನಿಯಾದಲ್ಲಿ ಇವರು ಎಂಬಿಎ ವ್ಯಾಸಂಗ ಮಾಡ್ತಿದ್ದಾರೆ. ದಕ್ಷಿಣ ಭಾರತ ಹಾಗೂ ಅಮೆರಿಕನ್​ ಭಾಷೆಯನ್ನ ಮಿಕ್ಸ್ ಮಾಡಿ ಸಲೀಸಾಗಿ ಮಾತನಾಡ್ತಾರೆ.

ಅಲ್ಲದೇ ಸಾಂಪ್ರದಾಯಿಕ ಭಾರತೀಯರ ಮನೆಯಲ್ಲಿರುವ ಕಟ್ಟು ಪಾಡುಗಳು ಇತರೆ ಹಲವು ವಿಚಾರಗಳನ್ನ ತಮಾಷೆಯಾಗಿ ಬಣ್ಣಿಸ್ತಾರೆ ನಿಹಾರಿಕಾ.

ಇವರ ವಿಡಿಯೋ ನೋಡಿದ ಅನೇಕ ಭಾರತೀಯ ಮೂಲದ ವಿದೇಶಿಗರು ನಾವು ಮನೆಯಲ್ಲೇ ಇದ್ದಂತೆ ಭಾಸವಾಗುತ್ತೆ ಅಂತಾ ಕಮೆಂಟ್​ ಹಾಕ್ತಾರೆ.

ಚೆನ್ನೈನಲ್ಲಿ ಜನಿಸಿದ ನಿಹಾರಿಕಾ ಬೆಂಗಳೂರಿನಲ್ಲಿ ಬೆಳೆದು ಇದೀಗ ಎಂಬಿಎ ವ್ಯಾಸಂಗಕ್ಕಾಗಿ ಅಮೆರಿಕದಲ್ಲಿ ಇದ್ದಾರೆ. ಇನ್​ಸ್ಟಾಗ್ರಾಂನ ರೀಲ್ಸ್​ ಮೂಲಕ ಇದೀಗ ಮನೆ ಮಾತಾಗಿದ್ದಾರೆ.

View this post on Instagram

A post shared by Niharika Nm (@niharika_nm)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...