ಟಿಕ್ಟಾಕ್ನ ಬಳಿಕ ಇದೀಗ ಇನ್ಸ್ಟಾಗ್ರಾಂ ಪ್ರಸ್ತುತ ಪಡಿಸಿರುವ ರೀಲ್ಸ್ ನೆಟ್ಟಿಗರಿಗೆ ಟಿಕ್ಟಾಕ್ ರೀತಿಯಲ್ಲೇ ಖುಷಿ ಕೊಡ್ತಿದೆ. ಇದರಲ್ಲಿ ಒಬ್ಬ ಯುವತಿ ಎಷ್ಟು ಫೇಮಸ್ ಆಗಿದ್ದಾರೆ ಅಂದರೆ ಅವರ ರೀಲ್ಸ್ ವಿಡಿಯೋವನ್ನ ಸ್ವತಃ ಕೇಂದ್ರ ಸಚಿವೆ ಸ್ಮೃತಿ ಇರಾನಿ ಶೇರ್ ಮಾಡಿದ್ದಾರೆ.
ಇಷ್ಟು ಮಾತ್ರವಲ್ಲದೇ ನೆಟ್ಫ್ಲಿಕ್ಸ್ನ ಯುಟ್ಯೂಬ್ ಶೋ ಬೆಹೆನ್ಸ್ಪ್ಲೇನಿಂಗ್ನಲ್ಲಿ ಅತಿಥಿ ಪಾತ್ರದಲ್ಲೂ ಈಕೆ ಕಾಣಿಸಿಕೊಂಡಿದ್ದಾರೆ. ಕೇವಲ 2 ತಿಂಗಳಲ್ಲಿ ಈಕೆಯ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ದಾಟಿದೆ.
ಅಂದಹಾಗೆ ಈಕೆ ಚೆನ್ನೈ ಮೂಲದ ನಿಹಾರಿಕಾ ಎನ್. ಎಂ. ಇವರು ಇಷ್ಟು ಬೇಗ ಫೇಮಸ್ ಆಗೋಕೆ ಕಾರಣ ಇವರ ಮಾತಿನ ಧಾಟಿ. ಕ್ಯಾಲಿಫೋರ್ನಿಯಾದಲ್ಲಿ ಇವರು ಎಂಬಿಎ ವ್ಯಾಸಂಗ ಮಾಡ್ತಿದ್ದಾರೆ. ದಕ್ಷಿಣ ಭಾರತ ಹಾಗೂ ಅಮೆರಿಕನ್ ಭಾಷೆಯನ್ನ ಮಿಕ್ಸ್ ಮಾಡಿ ಸಲೀಸಾಗಿ ಮಾತನಾಡ್ತಾರೆ.
ಅಲ್ಲದೇ ಸಾಂಪ್ರದಾಯಿಕ ಭಾರತೀಯರ ಮನೆಯಲ್ಲಿರುವ ಕಟ್ಟು ಪಾಡುಗಳು ಇತರೆ ಹಲವು ವಿಚಾರಗಳನ್ನ ತಮಾಷೆಯಾಗಿ ಬಣ್ಣಿಸ್ತಾರೆ ನಿಹಾರಿಕಾ.
ಇವರ ವಿಡಿಯೋ ನೋಡಿದ ಅನೇಕ ಭಾರತೀಯ ಮೂಲದ ವಿದೇಶಿಗರು ನಾವು ಮನೆಯಲ್ಲೇ ಇದ್ದಂತೆ ಭಾಸವಾಗುತ್ತೆ ಅಂತಾ ಕಮೆಂಟ್ ಹಾಕ್ತಾರೆ.
ಚೆನ್ನೈನಲ್ಲಿ ಜನಿಸಿದ ನಿಹಾರಿಕಾ ಬೆಂಗಳೂರಿನಲ್ಲಿ ಬೆಳೆದು ಇದೀಗ ಎಂಬಿಎ ವ್ಯಾಸಂಗಕ್ಕಾಗಿ ಅಮೆರಿಕದಲ್ಲಿ ಇದ್ದಾರೆ. ಇನ್ಸ್ಟಾಗ್ರಾಂನ ರೀಲ್ಸ್ ಮೂಲಕ ಇದೀಗ ಮನೆ ಮಾತಾಗಿದ್ದಾರೆ.
https://www.instagram.com/p/CJk0MbZgQJh/?utm_source=ig_web_copy_link
https://www.instagram.com/p/CJN-oO3gUJR/?utm_source=ig_web_copy_link