ಹೆಚ್ಚಿನ ನವವಿವಾಹಿತರು ಮದುವೆಯ ಬಳಿಕ ಹನಿಮೂನ್ಗಾಗಿ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆದರೆ ಕರ್ನಾಟಕದ ನವ ಜೋಡಿಯೊಂದು ಹನಿಮೂನ್ಗಾಗಿ ಮೀಸಲಿಟ್ಟಿದ್ದ ಸಮಯದಲ್ಲಿ ಪರಿಸರ ಕಾಳಜಿ ಮೆರೆದಿದ್ದಾರೆ.
ಅನುದೀಪ್ ಹೆಗಡೆ ಹಾಗೂ ಮಿನುಶಾ ಕಾಂಚನ್ ಇತರೆ ನವಜೋಡಿಯಂತೆಯೇ ಹನಿಮೂನ್ಗೆ ಸುಂದರವಾದ ಸ್ಥಳವೊಂದನ್ನ ಆಯ್ಕೆ ಮಾಡಿದ್ದರು, ಆದರೆ ಉಡುಪಿ ಜಿಲ್ಲೆಯ ಬೈಂದೂರು ಸಮುದ್ರದ ಬಳಿ ಪ್ರಿ ವೆಡ್ಡಿಂಗ್ ಫೋಟೊ ಶೂಟ್ ವೇಳೆ ಅಲ್ಲಿ ತ್ಯಾಜ್ಯ ಸಂಗ್ರಹವಾಗಿರೋದನ್ನ ಗಮನಿಸಿದ ದಂಪತಿ, ತಮ್ಮ ಹನಿಮೂನ್ ಪ್ಲಾನ್ ರದ್ದು ಮಾಡಿ ಸೋಮೇಶ್ವರ ಬೀಚ್ ಸ್ವಚ್ಛ ಮಾಡೋಕೆ ಮುಂದಾಗಿದ್ದಾರೆ.
ನವೆಂಬರ್ 18ರಂದು ವಿವಾಹವಾಗಿದ್ದ ಈ ದಂಪತಿ ಎರಡು ವಾರಗಳ ಕಾಲ ಬೀಚ್ನ್ನು ಸ್ವಚ್ಚ ಮಾಡಿದ್ದಾರೆ. ಸೋಮೇಶ್ವರ ಬೀಚ್ನಿಂದ 800 ಕೆಜಿ ತ್ಯಾಜ್ಯವನ್ನ ಸಂಗ್ರಹಿಸಿ ಬೇರೆಡೆ ಸ್ಥಳಾಂತರಿಸಿದ್ದಾರೆ.