
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಟಿಟಿಡಿ ದೇವಾಲಯಕ್ಕೆ ಭೇಟಿ ನೀಡಿದ ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬಳಿಕ ಬೆಂಬಲಿಗರಿಗೆ ಲಾಡು ಹಂಚಿದ್ದಾರೆ. ಕೊರೋನಾ ಕಡಿಮೆಯಾಗುತ್ತಿದ್ದು ಮತದಾರರು ಮತದಾನ ಮಾಡಬೇಕು. ತಮ್ಮ ಹಕ್ಕು ಚಲಾಯಿಸಬೇಕು. ಭಾರತ ದೇಶದ ಪ್ರಜೆಯಾಗಿ ಚುನಾವಣೆ ಬಂದಾಗ ಮತ ಚಲಾಯಿಸುವುದು ನಮ್ಮ ಹಕ್ಕು. ಹಕ್ಕನ್ನು ಯಾರು ಕಳೆದುಕೊಳ್ಳಬಾರದು ಎಂದು ಅವರು ತಿಳಿಸಿದ್ದಾರೆ.