alex Certify ಬಿಜೆಪಿ ಅಭ್ಯರ್ಥಿ ಮುನಿರತ್ನ ಆಸ್ತಿ ಎಷ್ಟಿದೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಅಭ್ಯರ್ಥಿ ಮುನಿರತ್ನ ಆಸ್ತಿ ಎಷ್ಟಿದೆ ಗೊತ್ತಾ….?

ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮುನಿರತ್ನ ಅವರ ಬಳಿ 4 ಕೆಜಿ ಚಿನ್ನ, 30 ವಾಹನ ಸೇರಿ ಸುಮಾರು 89 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ.

ಇದರೊಂದಿಗೆ ಅವರಿಗೆ 42.32 ಕೋಟಿ ರೂಪಾಯಿ ಸಾಲ ಕೂಡ ಇದೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ವಿಚಾರಣೆಗೆ ಬಾಕಿ ಉಳಿದಿದೆ. ಮುನಿರತ್ನ ಅವರ ಬಳಿ 10.66 ಲಕ್ಷ ರೂಪಾಯಿ ಇದೆ. ಅವರ ಪತ್ನಿ ಬಳಿ 3.98 ಲಕ್ಷ ರೂಪಾಯಿ ಇದೆ.

ಬ್ಯಾಂಕ್ ನಲ್ಲಿ 1.08 ಕೋಟಿ ರೂಪಾಯಿ ಠೇವಣಿ ಇಟ್ಟಿದ್ದು ಅವರ ಪತ್ನಿ ಹೆಸರಲ್ಲಿ 5.67 ಲಕ್ಷ ಠೇವಣಿ ನ್ಯಾಯಾಲಯದಲ್ಲಿ 7.07 ಲಕ್ಷ ರೂಪಾಯಿ ಠೇವಣಿ ಮಾಡಲಾಗಿದೆ. ಮುನಿರತ್ನ ವಿವಿಧ ಕಂಪನಿಗಳ ಷೇರು ಮತ್ತು ಬಾಂಡ್ ಗಳಲ್ಲಿ 91.90 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ.

ರಾಕ್ಲೈನ್ ಟೆಲಿಕಮ್ಯುನಿಕೇಶನ್ ನಲ್ಲಿ 75.40 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. 21.37 ಕೋಟಿ ರೂಪಾಯಿ ಸಾಲ ನೀಡಿದ್ದಾರೆ. 1.23 ಕೋಟಿ ರೂಪಾಯಿ ಮೌಲ್ಯದ ವಜ್ರ, ಚಿನ್ನಾಭರಣ ಅವರ ಬಳಿ ಇದೆ. ಎರಡು ಬೆಂಜ್, ಇನೋವಾ, ಹೊಸ ಕಿಯಾ ಕಾರ್ನಿವಲ್ ಸೇರಿದಂತೆ 30 ವಾಹನಗಳಿವೆ. ಇವುಗಳ ಮೌಲ್ಯ 1.31 ಕೋಟಿ ರೂಪಾಯಿ ಆಗಿದೆ. 26.11 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಕೃಷಿ ಮತ್ತು ಕೃಷಿಯೇತರ ಭೂಮಿ ಅವರಿಗೆ ಇದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...