alex Certify ಆಮ್ಲಜನಕದ ಅಭಾವದಿಂದ ಕಂಗೆಟ್ಟಿದ್ದ ಸೋಂಕಿತರಿಗೆ ಸಿಹಿ ಸುದ್ದಿ ನೀಡಿದ ಸಚಿವ ಸುಧಾಕರ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಮ್ಲಜನಕದ ಅಭಾವದಿಂದ ಕಂಗೆಟ್ಟಿದ್ದ ಸೋಂಕಿತರಿಗೆ ಸಿಹಿ ಸುದ್ದಿ ನೀಡಿದ ಸಚಿವ ಸುಧಾಕರ್..​..!

ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ರೋಗಿಗಳು ಸಾವನ್ನಪ್ಪಿದ್ದ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಈ ಸಂಬಂಧ ಅನೇಕ ಕ್ರಮಗಳನ್ನ ಕೈಗೊಂಡಿದೆ. ಇದೀಗ ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸುಧಾಕರ್​​ ರಾಜ್ಯಕ್ಕೆ ಈಗಾಗಲೇ 1075 ಮೆ.ಟನ್​ ವೈದ್ಯಕೀಯ ಆಮ್ಲಜನಕದ ಪೂರೈಕೆಯಾಗಿದೆ. ಅಲ್ಲದೇ ಅಗತ್ಯ ಆಕ್ಸಿಜನ್​ ಪೂರೈಕೆಗೆ ಪೂರಕವಾಗುವಂತಹ ಎಲ್ಲಾ ಕ್ರಮಗಳನ್ನ ಕೈಗೊಳ್ಳಲಾಗುವುದು ಎಂದು ಹೇಳಿದ್ರು.

ರಾಜ್ಯದ ಹಲವು ಕಡೆಗಳಲ್ಲಿ ಅನಗತ್ಯವಾಗಿ ಆಕ್ಸಿಜನ್ ಬಳಕೆ ಮಾಡಿದ್ದೇ ಈ ಅಭಾವಕ್ಕೆ ಕಾರಣವಾಗಿದೆ. ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಅನಗತ್ಯವಾಗಿ ಆಕ್ಸಿಜನ್​ ಬಳಕೆಯಾಗದಂತೆ ನೋಡಿಕೊಳ್ಳಿ ಎಂದು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ರು.

ಇದೇ ವೇಳೆ ಆಕ್ಸಿಜನ್​ ಪೂರೈಕೆಯಲ್ಲಿ ನೆರವಾಗುತ್ತಿರುವ ಸಂಘ – ಸಂಸ್ಥೆಗಳು ಹಾಗೂ ಸಿನಿತಾರೆಯರಿಗೆ ಸುಧಾಕರ್​ ಧನ್ಯವಾದ ಅರ್ಪಿಸಿದ್ರು. ಆಕ್ಸಿಜನ್​ ಅಭಾವವನ್ನ ಸರಿದೂಗಿಸಲು ಸರ್ಕಾರದ ಜೊತೆ ಹಲವು ಸಂಘ ಸಂಸ್ಥೆಗಳು ಕೈ ಜೋಡಿಸಿರೋದು ಸ್ವಾಗತಾರ್ಹವಾಗಿದೆ. ಇಂದು ನಟ ಭುವನ್​ ಹಾಗೂ ನಟಿ ಹರ್ಷಿಕಾ ಪೂಣಚ್ಚ ಜನರ ಸಹಕಾರಕ್ಕೆ ಮುಂದೆ ಬಂದಿದ್ದಾರೆ. ಈ ರೀತಿ ನಟರು ನೆರವು ನೀಡ್ತಾ ಇರೋದು ನಿಜಕ್ಕೂ ಒಳ್ಳೆಯ ಕೆಲಸವಾಗಿದೆ. ಇದರಿಂದ ಅನೇಕರಿಗೆ ಸ್ಪೂರ್ತಿ ಸಿಗಲಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...