ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಜಾರಿಗೆ ತರಲಾದ ಲಾಕ್ಡೌನ್ ಅವಧಿ ಪೂರ್ಣಗೊಳ್ಳಲು ಇನ್ನೇನು ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿದೆ. ಆದರೆ ರಾಜ್ಯದಲ್ಲಿ ಕೋವಿಡ್ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಲಾಕ್ಡೌನ್ ವಿಸ್ತರಣೆ ಮಾಡ್ತಾರಾ ಎಂಬ ಪ್ರಶ್ನೆ ಹರಿದಾಡುತ್ತಿದೆ.
ಇನ್ನು ಈ ವಿಚಾರವಾಗಿ ದಾವಣಗೆರೆಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿ ಸೋಂಕು ಕಡಿಮೆಯಾಗುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಲಾಕ್ಡೌನ್ ಮುಂದುವರಿಸೋದು ಉತ್ತಮ ಅನ್ನೋದು ಬಹುತೇಕ ಎಲ್ಲ ಸಚಿವರ ಅಭಿಪ್ರಾಯವಾಗಿದೆ. ಸಿಎಂ ಯಡಿಯೂರಪ್ಪಗೂ ಇದೇ ಅನಿಸಿಕೆ ಇದೆ. ಈ ಸಂಬಂಧ 23ನೇ ತಾರೀಖು ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಬಹುತೇಕ ಲಾಕ್ಡೌನ್ ವಿಸ್ತರಣೆ ಪಕ್ಕಾ ಎಂದು ಹೇಳಿದ್ರು.
ಇನ್ನು ರಾಜ್ಯದಲ್ಲಿ ಆಮ್ಲಜನಕ ಹಾಗೂ ರೆಮಿಡಿಸಿವರ್ ಪೂರೈಕೆ ವಿಚಾರವಾಗಿಯೂ ಮಾತನಾಡಿದ ಸಚಿವ ಸುಧಾಕರ್, ಆಮ್ಲಜನಕ ಹಾಗೂ ರೆಮಿಡಿಸಿವರ್ಗೆ ನಮ್ಮಲ್ಲಿ ಯಾವುದೇ ಕೊರತೆ ಇಲ್ಲ. ರಾಜ್ಯಕ್ಕೆ 10 ಲಕ್ಷ ರೆಮಿಡಿಸಿವರ್ ವಯಲ್ಸ್ ಬಂದಿದೆ. ಇದಕ್ಕಾಗಿ ನಾವು ಸದಾನಂದ ಗೌಡರಿಗೆ ಧನ್ಯವಾದ ತಿಳಿಸಲೇಬೇಕು ಎಂದು ಹೇಳಿದ್ರು.