ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಎಂಡಿ ಮತ್ತು ಎಂಎಸ್ ಸೀಟುಗಳ ಶುಲ್ಕವನ್ನು ಭಾರೀ ಹೆಚ್ಚಳ ಮಾಡುವ ಮೂಲಕ ಸರ್ಕಾರ ವೈದ್ಯಲೋಕಕ್ಕೆ ದೊಡ್ಡ ಆಘಾತ ನೀಡಿದೆ.
ಸರ್ಕಾರಿ ವೈದ್ಯ ಕಾಲೇಜುಗಳಲ್ಲಿ ಸರ್ಕಾರಿ ಸೀಟಿಗೆ ಒಂದು ಲಕ್ಷದಿಂದ 1.13 ಲಕ್ಷ ರೂ., ಖಾಸಗಿ ವೈದ್ಯ ಕಾಲೇಜಿನ ಸರ್ಕಾರಿ ಸೀಟಿಗೆ 5.8 ಲಕ್ಷ ರೂ.ನಿಂದ 7.13 ಲಕ್ಷ ರೂ. ಹಾಗೂ ಖಾಸಗಿ ಕಾಲೇಜುಗಳ ಖಾಸಗಿ ಸೀಟಿಗೆ 8.72 ಲಕ್ಷ ರೂನಿಂದ 11.50 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.
ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳಲ್ಲಿ ಈ ವರ್ಷ ಶುಲ್ಕ ಹೆಚ್ಚಳ ಮಾಡುವಂತಿಲ್ಲ ಎಂದು ಹೇಳಿದ್ದ ಸರ್ಕಾರ, ಎಂಡಿ ಮತ್ತು ಎಂಎಸ್ ಕೋರ್ಸುಗಳ ಶುಲ್ಕವನ್ನು ಹೆಚ್ಚಳ ಮಾಡುವ ಮೂಲಕ ವೈದ್ಯಲೋಕಕ್ಕೆ ಆಘಾತ ನೀಡಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳ ಒತ್ತಡಕ್ಕೆ ಮಣಿದು ಸರ್ಕಾರ ವೈದ್ಯ ಸೀಟು ಶುಲ್ಕವನ್ನು ಭಾರೀ ಹೆಚ್ಚಳ ಮಾಡಿರುವ ಆರೋಪ ಕೇಳಿಬಂದಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಹೇಳಲಾಗಿದೆ.