ಆಕ್ಸಿಜನ್ ಅಭಾವದಿಂದ ತತ್ತರಿಸಿದ್ದ ಕರ್ನಾಟಕಕ್ಕೆ ಶುಭಸುದ್ದಿಯೊಂದು ಸಿಕ್ಕಿದೆ. ಇದೇ ಮೊದಲ ಬಾರಿಗೆ ರಾಜ್ಯಕ್ಕೆ 6 ಆಕ್ಸಿಜನ್ ಕಂಟೇನರ್ಗಳು ರೈಲಿನ ಮೂಲಕ ಜಮ್ಶೆಡ್ಪುರದಿಂದ ಬಂದಿವೆ.
ನಿನ್ನೆ ಮುಂಜಾನೆ 3 ಗಂಟೆ ಸುಮಾರಿಗೆ ಹೊರಟಿದ್ದ ರೈಲು ಇಂದು ಬೆಳಗ್ಗೆ ಬೆಂಗಳೂರಿಗೆ ಬಂದು ತಲುಪಿದೆ. ಈ ಮೂಲಕ ರೈಲ್ವೆ ಇಲಾಖೆ ಇದೇ ಮೊದಲ ಬಾರಿಗೆ ಗ್ರೀನ್ ಕಾರಿಡಾರ್ನಲ್ಲಿ ಬೆಂಗಳೂರಿಗೆ ಆಕ್ಸಿಜನ್ ಪೂರೈಕೆ ಮಾಡಿದಂತಾಗಿದೆ. ಕಂಟೇನರ್ ಕಾರ್ಪೋರೇಷನ್ ಆಫ್ ಇಂಡಿಯಾದ ಡಿಪೋಗೆ ಬಂದ ಆಕ್ಸಿಜನ್ಗಳನ್ನ ಸದ್ಯದಲ್ಲೇ ರಾಜ್ಯದ ವಿವಿಧೆಡೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇವಲ 30ಗಂಟೆಗಳ ಅವಧಿಯಲ್ಲಿ ಈ ಆಕ್ಸಿಜನ್ ಕಂಟೈನರ್ಗಳು ಬೆಂಗಳೂರಿಗೆ ಬಂದು ತಲುಪಿದ್ದು ಕೊರೊನಾ 2ನೇ ಅಲೆ ವಿರುದ್ಧ ಹೋರಾಡುತ್ತಿರುವ ರಾಜ್ಯಕ್ಕೆ ಇದೊಂದು ಮುನ್ನಡೆಯಾಗಿದೆ.