
ಕಲ್ಬುರ್ಗಿ ಜಿಲ್ಲೆಯ ಫರಹತಾಬಾದ್ ನಲ್ಲಿ ಕೊರೊನಾ ಸೋಂಕಿತರ ಕುಟುಂಬಕ್ಕೆ ನೆರೆಹೊರೆಯವರು ತಾತ್ಸಾರ ತೋರಿದ್ದಾರೆ.
ಕುಡಿಯಲು ನೀರು ಕೂಡ ಕೊಡದೇ ಸೋಂಕಿತ ಕುಟುಂಬಕ್ಕೆ ತಾತ್ಸಾರ ತೋರಿದ್ದು, ಈ ಬಗ್ಗೆ ಮಾಹಿತಿ ಪಡೆದ ಫರಹತಾಬಾದ್ ಠಾಣೆಯ ಮಹಿಳಾ ಎಸ್ಐ ಯಶೋಧಾ ಅವರು ನೀರು ತಲುಪಿಸಿದ್ದಾರೆ. ಅಲ್ಲದೆ ದಿನಸಿ ಕಿಟ್ ತರಿಸಿಕೊಟ್ಟು ಸೋಂಕಿತರ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ.
ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಕೊರೋನಾ ತಡೆಗೆ ಮುಂಜಾಗ್ರತೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.