ಮಹಾರಾಷ್ಟ್ರದಿಂದ ಬೆಳಗಾವಿ ಜಿಲ್ಲೆಗೆ ವಾಪಸಾಗಿದ್ದ ಮಹಿಳೆ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದಾರೆ.
ಪೆರೋಲ್ ಮೇಲೆ ಜೈಲಿನಿಂದ ಬಂದಿದ್ದ ಪತಿ ಜೊತೆಗೆ ಆಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿರುವ ಕ್ವಾರಂಟೈನ್ ಸೆಂಟರ್ ನಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ್ದ ಮಹಿಳೆಯನ್ನು ಇರಿಸಲಾಗಿತ್ತು. ಅಲ್ಲಿದ್ದವರ ಕಣ್ತಪ್ಪಿಸಿ ಪೆರೋಲ್ ಮೇಲೆ ಜೈಲಿನಿಂದ ಬಂದಿರುವ ಪತಿ ಜೊತೆಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.