alex Certify BIG NEWS: ಸರ್ಕಾರದಿಂದ ಲಾಕ್ ಡೌನ್ ಮಾರ್ಗಸೂಚಿ ರಿಲೀಸ್, ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸರ್ಕಾರದಿಂದ ಲಾಕ್ ಡೌನ್ ಮಾರ್ಗಸೂಚಿ ರಿಲೀಸ್, ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯ ಸರ್ಕಾರದಿಂದ 5 ನೇ ಹಂತದ ಲಾಕ್ಡೌನ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಜೂನ್ 7 ರವರೆಗೆ ಹೋಟೆಲ್, ರೆಸ್ಟೋರೆಂಟ್ ಮಾಲ್ ಬಂದ್ ಆಗಿರುತ್ತದೆ.

ಜೂನ್ 8 ರಿಂದ ಹೋಟೆಲ್, ರೆಸ್ಟೋರೆಂಟ್ ಆರಂಭಕ್ಕೆ ಅವಕಾಶ ನೀಡಲಾಗಿದೆ. ನಿಯಮಾನುಸಾರ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳನ್ನು ಓಪನ್ ಮಾಡಬಹುದು. ಜೂನ್ 8 ರಿಂದ ಹೋಟೆಲ್, ಮಾಲ್, ದೇವಾಲಯಗಳನ್ನು ಓಪನ್ ಮಾಡಬಹುದಾಗಿದೆ. ಎಷ್ಟು ಜನ ಸೇರಬಹುದು ಮತ್ತು ಸಾಮಾಜಿಕ ಅಂತರದ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ಹೇಳಲಾಗಿದೆ.

ಅದೇ ರೀತಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಿಯಮಾನುಸಾರ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಕಂಟೋನ್ಮೆಂಟ್ ಹೊರತುಪಡಿಸಿ ಉಳಿದ ಲಾಕ್ ಡೌನ್ ಸಡಿಲಿಕೆ ಇರುತ್ತದೆ. ಸಿನಿಮಾ ಮಂದಿರ ಓಪನ್ ಆಗುವುದಿಲ್ಲ.

ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಸ್ವಿಮ್ಮಿಂಗ್ ಪೂಲ್ ಸದ್ಯಕ್ಕೆ ಓಪನ್ ಆಗುವುದಿಲ್ಲ. ಜಿಮ್ ಸೆಂಟರ್, ಮೆಟ್ರೋ ಸಂಚಾರ ಇರುವುದಿಲ್ಲ. ಅಂತರರಾಷ್ಟ್ರೀಯ ವಿಮಾನ ಸಂಚಾರ ಇರುವುದಿಲ್ಲ. ಧಾರ್ಮಿಕ ಸಭೆ ಸಮಾರಂಭ ನಡೆಸುವಂತಿಲ್ಲ. ರಾತ್ರಿ 9 ಗಂಟೆವರೆಗೆ ಆಟೋ, ಕ್ಯಾಬ್ ಸಂಚಾರಕ್ಕೆ ಅವಕಾಶವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...