alex Certify ಲಾಕ್ ಡೌನ್ ನಿಂದ ತತ್ತರಿಸಿದ್ದ ಜನತೆಗೆ ‘ಗುಡ್ ನ್ಯೂಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ನಿಂದ ತತ್ತರಿಸಿದ್ದ ಜನತೆಗೆ ‘ಗುಡ್ ನ್ಯೂಸ್’

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಒಂದು ತಿಂಗಳ ಬಳಿಕ ಸಡಿಲ ಮಾಡಿದ್ದು ವಾಣಿಜ್ಯ ಚಟುವಟಿಕೆಗಳಿಗೆ ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ.

ಮೊಬೈಲ್ ರೀಚಾರ್ಜ್, ಆಹಾರ ಸಂಸ್ಕರಣೆ ಘಟಕ, ಹಾಲು ಬೇಕರಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಶೈಕ್ಷಣಿಕ ಪುಸ್ತಕ ಮಾರಾಟ ಮಳಿಗೆ, ಫ್ಯಾನ್ ಮಾರಾಟ ಎಲೆಕ್ಟ್ರಿಕ್ ಅಂಗಡಿಗಳನ್ನು ಓಪನ್ ಮಾಡಬಹುದು.

ನಗರ ಪ್ರದೇಶದಲ್ಲಿ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಕಾರ್ಯ ಕೈಗೊಳ್ಳಬಹುದು. ಹಿಟ್ಟಿನ ಗಿರಣಿ, ತೆಂಗು, ಅಡಕೆ, ಸಾಂಬಾರ ಪದಾರ್ಥ ಸಂಸ್ಕರಣೆ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ನಿರ್ಮಾಣ ಕಾಮಗಾರಿ, ನೀರು ಸರಬರಾಜು ಒಳಚರಂಡಿ ಕಾಮಗಾರಿ, ವಿದ್ಯುತ್ ಫೋನ್ ಸಂಪರ್ಕಕ್ಕೆ ಅನುಮತಿ ನೀಡಲಾಗಿದೆ. ಬಿತ್ತನೆ ಬೀಜ ಮಾರಾಟ, ಪೂರೈಕೆ, ನರ್ಸರಿ, ಜೇನು ಸಾಕಾಣಿಕೆ ಅದರ ಉತ್ಪನ್ನ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಡ್ರೈಫ್ರೂಟ್ಸ್ ಅಂಗಡಿಗಳಿಗೆ ಅವಕಾಶವಿದೆ. ಸರ್ಕಾರಿ ಕಚೇರಿ, ಸರಕುಸಾಗಣೆ ಆರಂಭವಾಗಲಿದೆ. ನಿರ್ಬಂಧಗಳನ್ನು ಕೊಂಚ ಸಡಿಲಗೊಳಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾಸ್ಕ್ ಧರಿಸುವುದು ಸೇರಿದಂತೆ ನಿಯಮ ಪಾಲನೆಯೊಂದಿಗೆ ಚಟುವಟಿಕೆ ನಡೆಸಲು ಅನುಮತಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...