alex Certify 1 ವಾರಕ್ಕೆ ಹೊಸ ಲಾಕ್ ಡೌನ್ ಮುಗಿಯುತ್ತೆ ಎಂದುಕೊಂಡವರಿಗೆ ಶಾಕಿಂಗ್ ನ್ಯೂಸ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ವಾರಕ್ಕೆ ಹೊಸ ಲಾಕ್ ಡೌನ್ ಮುಗಿಯುತ್ತೆ ಎಂದುಕೊಂಡವರಿಗೆ ಶಾಕಿಂಗ್ ನ್ಯೂಸ್…?

ಬೆಂಗಳೂರು: ಕೊರೋನಾ ತಡೆಯುವ ಸಲುವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರ ಲಾಕ್ಡೌನ್ ಘೋಷಣೆ ಮಾಡಲಾಗಿದೆ.

ಆದರೆ ಹೊಸ ಲಾಕ್ಡೌನ್ ಒಂದು ವಾರಕ್ಕೆ ಮುಗಿಯುವುದಿಲ್ಲ. ಮೂರು ವಾರ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸಚಿವರಾದ ಆರ್. ಅಶೋಕ್ ಮತ್ತು ಡಾ.ಕೆ. ಸುಧಾಕರ್ ಅವರು ಕೊರೊನಾ ವಿರುದ್ಧ ಹೋರಾಟ ಸದ್ಯಕ್ಕೆ ಮುಗಿಯುವುದಿಲ್ಲ ಎಂದು ಹೇಳಿದ್ದು ತಜ್ಞರು ಕೂಡ ಈ ಬಗ್ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಕೊರೋನಾ ಸದ್ಯದ ಪರಿಸ್ಥಿತಿ ಗಮನಿಸಿದಾಗ ಚಿಕಿತ್ಸೆ, ಮತ್ತಷ್ಟು ಸಿದ್ಧತೆಗೆ ಕನಿಷ್ಠ ಮೂರು ವಾರ ಸಮಯ ಬೇಕಾಗುತ್ತದೆ. ಹಾಗಾಗಿ, ಹೊಸ ಲಾಕ್ಡೌನ್ ಒಂದು ವಾರಕ್ಕೆ ಮುಗಿಯುವುದಿಲ್ಲ 3 ವಾರಗಳಿಗೆ ವಿಸ್ತರಣೆಯಾಗಬಹುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...