ಶಿವಮೊಗ್ಗ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ ಸಫಾಯಿ ಕರ್ಮಚಾರಿ /ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಹಾಗೂ ಅವರ ಅವಲಂಬಿತರಿಗೆ ವಿವಿಧ ಯೋಜನೆಗಳಿಗಾಗಿ ಆಹ್ವಾನಿಸಲಾಗಿದ್ದ ಅರ್ಜಿ ಸಲ್ಲಿಕೆ ದಿನಾಂಕವನ್ನು ಸೆ. 30 ರವರೆಗೆ ವಿಸ್ತರಿಸಿದೆ.
ಅರ್ಹ ಫಲಾಪೇಕ್ಷಿಗಳು ವೆಬ್ಸೈಟ್ www.ksskdc.in ಗೆ ಭೇಟಿ ನೀಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೋರಿದೆ.
ಯೋಜನೆಗಳು:
- ಸ್ವಯಂ ಉದ್ಯೋಗ ಯೋಜನೆ
ಅ. ಉದ್ಯಮ ಶೀಲತಾ ಯೋಜನೆ- (ಶೇ.70% ಅಥವಾ ಗರಿಷ್ಠ 1 ಲಕ್ಷ ರೂ. ಸಹಾಯಧನ)
ಆ. ನೇರಸಾಲ (25,000 ರೂ. ಸಹಾಯಧನ ಹಾಗೂ 25,000 ರೂ. ನೇರಸಾಲ ಒಟ್ಟು 50,000 ರೂ.)
- ಗಂಗಾ ಕಲ್ಯಾಣ ಯೋಜನೆ.
- ಮೈಕ್ರೋ ಕ್ರೆಡಿಟ್ ಯೋಜನೆ. (ಪ್ರೇರಣಾ ಮಹಿಳಾ ಸಂಘ)
- ಐರಾವತ ಯೋಜನೆ. ಕಾರು, ಆಟೋ, ಟಿಪ್ಪರ್(ಸರಕುವಾಹನ ಗಳಿಗೆ ಹೆಚ್ಚಿನ ಆದ್ಯತೆ) ನೀಡಲಾಗುವುದು.
- ಭೂ ಒಡೆತನ ಯೋಜನೆಯಡಿ(ಮಹಿಳಾ ಕೃಷಿ ಕಾರ್ಮಿಕರಿಗೆ) ಸೌಲಭ್ಯ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.