alex Certify ಮದ್ಯದಂಗಡಿ ಮಾಲೀಕನಿಗೆ ಸಂಕಷ್ಟ ತಂದೊಡ್ಡಿದೆ ಈ ಬಿಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದಂಗಡಿ ಮಾಲೀಕನಿಗೆ ಸಂಕಷ್ಟ ತಂದೊಡ್ಡಿದೆ ಈ ಬಿಲ್

ಬೆಂಗಳೂರು: ಕೊರೋನಾ ವೈರಸ್ ಅವಾಂತರ ಅಷ್ಟಿಷ್ಟಲ್ಲ. ಇಲ್ಲಿಯವರೆಗೆ ಲಾಕ್ ಡೌನ್ ಕಠಿಣವಾಗಿದ್ದರಿಂದ ಮದ್ಯದಂಗಡಿಗಳ ತೆರೆಯಲು ಅನುಮತಿ ಇರಲಿಲ್ಲ. ಆದರೆ, ಮೇ 4 ರಿಂದ ಅವಕಾಶ ಸಿಕ್ಕದ್ದೇ ತಡ ಎಣ್ಣೆ ಪ್ರಿಯರಿಗೆ ಸುಗ್ಗಿಯೋ ಸುಗ್ಗಿ. ಈಗ ವಿಷಯ ಅದಲ್ಲ.

ವ್ಯಕ್ತಿಯೊಬ್ಬ ಅದೆಷ್ಟು ಬರಗೆಟ್ಟಿದ್ದನೋ ಏನೋ ಒಂದೇ ಬಾರಿಗೆ ಬರೋಬ್ಬರಿ 52.841 ಸಾವಿರ ರೂಪಾಯಿ ಮೌಲ್ಯದ ಮದ್ಯ ಖರೀದಿಸಿ, ಅದರ ಬಿಲ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಅದೇ ಈಗ ಮದ್ಯದಂಗಡಿ ಮಾಲೀಕನಿಗೆ ಸಂಕಷ್ಟ ತಂದೊಡ್ಡಿದೆ.

ವೆನಿಲ್ಲಾ ಸ್ಪಿರಿಟ್ ಝೋನ್ ಎಂಬ ಮದ್ಯದಂಗಡಿಯಿಂದ ವ್ಯಕ್ತಿಯೊಬ್ಬ ಬರೋಬ್ಬರಿ 52,841 ರೂಪಾಯಿ ಮೌಲ್ಯದ ಮದ್ಯವನ್ನು ತೆಗೆದುಕೊಂಡಿದ್ದಾನೆ. ಬಳಿಕ ಅದರ ಬಿಲ್ಲನ್ನೂ ಪಡೆದಿದ್ದಾನೆ. ಅದರಲ್ಲಿ ಯಾವ ಯಾವ ಮದ್ಯ? ಎಷ್ಟು ಹಾಗೂ ಎಷ್ಟು ಪ್ರಮಾಣದ ಮದ್ಯ ಖರೀದಿಸಿದ್ದಾನೆ? ಮತ್ತೆ ಅದರ ಮೌಲ್ಯವೆಷ್ಟು ಎಂಬೆಲ್ಲ ಮಾಹಿತಿಯ ಜೊತೆಗೆ ಮದ್ಯದಂಗಡಿಯ ಹೆಸರೂ ಇತ್ತು. ಆ ಬಿಲ್ಲಿನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದು ಎಷ್ಟರ ಮಟ್ಟಿಗೆ ವೈರಲ್ ಆಗಿದೆ ಎಂದರೆ, ಇಡೀ ದೇಶಾದ್ಯಂತ ಬಹುತೇಕರ ಮೊಬೈಲ್ ತಲುಪಿದೆ.

ಈಗ ಇದು ಅಬಕಾರಿ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದೆ. ಅಬಕಾರಿ ನಿಯಮದನ್ವಯ ಒಬ್ಬ ವ್ಯಕ್ತಿಗೆ 13.5 ಲೀಟರ್ ಹಾರ್ಡ್ ಲಿಕ್ಕರ್ ಹಾಗೂ 35 ಲೀಟರ್ ಬಿಯರ್ ಅನ್ನು ಒಂದು ಬಾರಿ ಮಾರಬಹುದಾಗಿದೆ. ಆದರೆ, ಇಲ್ಲಿ ಚಿಲ್ಲರೆ ಮಾರಾಟಗಾರರು ಯಾವುದೇ ಕಾರಣಕ್ಕೂ ಭಾರತೀಯ ತಯಾರಿಕಾ ಫಾರಿನ್ ಮದ್ಯವನ್ನು 2.6 ಲೀಟರ್ ಅಥವಾ 18 ಲೀಟರ್ ಗಿಂತ ಹೆಚ್ಚು ಬಿಯರ್ ಅನ್ನು ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ಮಾರಾಟ ಮಾಡುವಂತಿಲ್ಲ. ಹೀಗಾಗಿ ಈಗ ಆ ಮದ್ಯದಂಗಡಿ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಅಬಕಾರಿ ಇಲಾಖೆ ಅಧಿಕಾರಿಗಳು, ಈ ಬಗ್ಗೆ ತನಿಖೆ ಕೈಗೊಂಡಿದ್ದು, ಯಾವ ಸೆಕ್ಷನ್ ಅಡಿ ಪ್ರಕರಣ ದಾಖಲಿಸಬೇಕು ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...