alex Certify BIG BREAKING: ಮತ್ತೆ ಕಠಿಣ ಲಾಕ್ ಡೌನ್, ನೈಟ್ ಕರ್ಫ್ಯೂ ಜಾರಿ: ‘ಮದ್ಯ’ ಪ್ರಿಯರಿಗೆ ಮತ್ತೊಂದು ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಮತ್ತೆ ಕಠಿಣ ಲಾಕ್ ಡೌನ್, ನೈಟ್ ಕರ್ಫ್ಯೂ ಜಾರಿ: ‘ಮದ್ಯ’ ಪ್ರಿಯರಿಗೆ ಮತ್ತೊಂದು ಶಾಕ್

ಬೆಂಗಳೂರು: ಕೊರೋನಾ ಸೋಂಕು ತಡೆಗೆ ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರ ಮುಂದಿನ ಭಾನುವಾರ ಕಂಪ್ಲೀಟ್ ಲಾಕ್ ಡೌನ್, ನಾಳೆಯಿಂದ ನೈಟ್ ಕರ್ಫ್ಯೂ ಜಾರಿಗೆ ಮುಂದಾಗಿದೆ.

ಅದೇ ರೀತಿ ಮದ್ಯದಂಗಡಿಗಳನ್ನು ಪ್ರತಿ ಭಾನುವಾರ ಬಂದ್ ಮಾಡಲಾಗುವುದು. ಪ್ರತಿದಿನ ರಾತ್ರಿ 9 ಗಂಟೆಯ ಬದಲಿಗೆ 8 ಗಂಟೆಯವರೆಗೆ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಿ ನಂತರ ಬಂದ್ ಮಾಡಲಾಗುವುದು.

ಜುಲೈ 5 ರಿಂದ ರಾಜ್ಯದಲ್ಲಿ ಪ್ರತಿ ಭಾನುವಾರ ಮದ್ಯ ಮಾರಾಟ ಇರುವುದಿಲ್ಲ. ಮದ್ಯ ಮಾರಾಟದ ಅವಧಿಯನ್ನು ಒಂದು ಗಂಟೆ ಕಡಿತಗೊಳಿಸಲಾಗಿದೆ. ರಾತ್ರಿ 9 ಗಂಟೆ ಬದಲಿಗೆ 8 ಗಂಟೆಯಿಂದಲೇ ಮದ್ಯ ಮಾರಾಟ ಸ್ಥಗಿತವಾಗಲಿದೆ. ನಾಳೆಯಿಂದಲೇ ಈ ನಿಯಮ ಜಾರಿಗೆ ಬರಲಿದೆ ಎನ್ನಲಾಗಿದೆ.

ಪ್ರತಿದಿನ ನೈಟ್ ಕರ್ಫ್ಯೂ, ಪ್ರತಿ ಭಾನುವಾರ ಕಂಪ್ಲೀಟ್ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಮದ್ಯ ಮಾರಾಟ ಇರುವುದಿಲ್ಲ. ಅಗತ್ಯ ವಸ್ತು ಮತ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...