alex Certify ಬಟ್ಟೆ ತೊಳೆಯಲು ಹೋದಾಗಲೇ ದುರಂತ: ತಾಯಿ, ಮಕ್ಕಳ ದಾರುಣ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಟ್ಟೆ ತೊಳೆಯಲು ಹೋದಾಗಲೇ ದುರಂತ: ತಾಯಿ, ಮಕ್ಕಳ ದಾರುಣ ಸಾವು

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೀರನಹಳ್ಳಿ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ತಾಯಿ, ಮಕ್ಕಳು ನೀರು ಪಾಲಾಗಿದ್ದಾರೆ.

40 ವರ್ಷದ ಗೀತಾ ಮತ್ತು ಅವರ ಮಕ್ಕಳಾದ ಸವಿತಾ(19) ಹಾಗೂ ಸೌಮ್ಯ(14) ಮೃತಪಟ್ಟವರು ಎಂದು ಹೇಳಲಾಗಿದೆ. ಮೂವರು ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಕಾಲು ಜಾರಿ ಒಬ್ಬರು ನೀರಿಗೆ ಬಿದ್ದಿದ್ದಾರೆ. ಒಬ್ಬರನ್ನು ರಕ್ಷಿಸಲು ಇನ್ನಿಬ್ಬರು ಧಾವಿಸಿದ್ದು, ಮೂವರೂ ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

ಈ ವೇಳೆ ಕೆರೆ ಬಳಿ ಯಾರೂ ಇರಲಿಲ್ಲ. ದಡದಲ್ಲಿದ್ದ ಬಟ್ಟೆ ಮತ್ತು ಕೆರೆಯಲ್ಲಿ ತೇಲುತ್ತಿದ್ದ ಬಿಂದಿಗೆಯನ್ನು ಗಮನಿಸಿದ ದಾರಿ ಹೋಕರು ಯಾರೋ ನೀರಿಗೆ ಬಿದ್ದಿರಬಹುದೆಂದು ಹುಡುಕಾಟ ನಡೆಸಿದಾಗ ಗೊತ್ತಾಗಿದೆ. ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...