ಸ್ಮಾರ್ಟ್ ಫೋನ್ಗಳು ಇಲ್ಲದೇ ಬದುಕೇ ಇಲ್ಲ ಎಂಬಷ್ಟರಮಟ್ಟಿಗೆ ನಾವುಗಳು ಮೊಬೈಲ್ಗೆ ಅವಲಂಬಿತರಾಗಿದ್ದೇವೆ. ನೀವು ಕೂಡ ಮೊಬೈಲ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಪಡ್ತಿರೋ ಅನ್ನೋದಾದ್ರೆ ನಿಮ್ಮ ಮೊಬೈಲ್ ಬಹಳ ವರ್ಷಗಳ ಕಾಲ ಬಾಳಿಕೆ ಬರಬೇಕು ಅಂದರೆ ನೀವು ಕೆಲವೊಂದಿಷ್ಟು ನಿಯಮಗಳನ್ನ ಅನುಸರಿಸಬೇಕಾಗುತ್ತೆ.
ಸ್ಮಾರ್ಟ್ ಫೋನ್ ಗಳು ಬ್ಯಾಟರಿ ಹಾಳಾಯ್ತು ಅಂದರೆ ಆ ಫೋನ್ನ ಕತೆ ಮುಗೀತು ಅಂತಾನೇ ಅರ್ಥ. ಹೀಗಾಗಿ ಮೊಬೈಲ್ ಬ್ಯಾಟರಿಗಳ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಳ್ಳೋದು ಅತಗತ್ಯ. ನೀವು ಮೊಬೈಲ್ನ್ನ ಹೇಗೆ ಚಾರ್ಜ್ ಮಾಡ್ತೀರಾ ಅನ್ನೋದರ ಮೇಲೆ ಮೊಬೈಲ್ ಬ್ಯಾಟರಿಯ ಕ್ಷಮತೆ ಬಾಳಿಕೆಗೆ ಬರುತ್ತೆ.
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮೊಬೈಲ್ನ್ನ ಚಾರ್ಜ್ ಮಾಡ್ತಾರೆ. ಇದರಲ್ಲಿ ಕೆಲವೊಂದು ಅಭ್ಯಾಸಗಳು ಮೊಬೈಲ್ ಬ್ಯಾಟರಿಯನ್ನೇ ಹಾಳುಮಾಡಬಲ್ಲವು. ಹೀಗಾಗಿ ಮೊಬೈಲ್ ಚಾರ್ಜ್ ಮಾಡುವ ಸರಿಯಾದ ರೀತಿ ಹೇಗೆ ಅನ್ನೋದನ್ನ ತಿಳಿದುಕೊಳ್ಳೋದು ಅನಿವಾರ್ಯ. ಹೀಗಾಗಿ ಮೊಬೈಲ್ಗಳನ್ನ ಸರಿಯಾದ ವಿಧಾನದಲ್ಲಿ ಚಾರ್ಜ್ ಮಾಡುವ ಬಗ್ಗೆ ಇಲ್ಲಿದೆ ಮಾಹಿತಿ.
ಬಹುತೇಕ ಮಂದಿ ಬೆಳಗ್ಗೆ ಪೂರ್ತಿ ಮೊಬೈಲ್ ಬಳಕೆ ಮಾಡಿ ರಾತ್ರಿ ಪೂರ್ತಿ ಮೊಬೈಲ್ನ್ನ ಚಾರ್ಜಿಂಗ್ನಲ್ಲಿ ಇಡ್ತಾರೆ. ಇದು ಬಹಳ ತಪ್ಪಾದ ವಿಧಾನವಾಗಿದೆ. ಮೊಬೈಲ್ನಲ್ಲಿ ರಾತ್ರಿಪೂರ್ತಿ ಚಾರ್ಜಿಂಗ್ನಲ್ಲಿ ಇಟ್ಟರೆ ಬ್ಯಾಟರಿ ಬಹುಬೇಗ ಹಾಳಾಗುತ್ತೆ. ಹೀಗಾಗಿ ನೀವು ಯಾವಾಗ ಎಚ್ಚರ ಇರ್ತೀರೋ ಆವಾಗಲೇ ಮೊಬೈಲ್ ಚಾರ್ಜ್ ಮಾಡಿ. ಎಂದಿಗೂ ಕೂಡ ಅವಶ್ಯಕತೆಗಿಂತ ಹೆಚ್ಚು ಸಮಯ ಮೊಬೈಲ್ ಚಾರ್ಜಿಂಗ್ನಲ್ಲಿ ಇಡದಿರಿ.
ಬಹುತೇಕ ಮಂದಿ ಮೊಬೈಲ್ನ್ನ 100 ಪರ್ಸೆಂಟ್ ಚಾರ್ಜ್ ಮಾಡಿಯೇ ಬಳಿಕ ಮೊಬೈಲ್ ಬಳಕೆ ಮಾಡ್ತಾರೆ. ಆದರೆ ಈ ರೀತಿ ಮೊಬೈಲ್ನ ಪ್ರತಿಬಾರಿ 100 ಪರ್ಸೆಂಟ್ ಚಾರ್ಜ್ ಮಾಡಿ ಬಳಕೆ ಮಾಡೋದೂ ಕೂಡ ತಪ್ಪೇ. ಹೀಗಾಗಿ ಮೊಬೈಲ್ನ್ನ 100 ಪೆರ್ಸೆಂಟ್ ಚಾರ್ಜ್ ಮಾಡುವ ಅಭ್ಯಾಸವನ್ನ ಬಿಟ್ಟುಬಿಡಿ. 80-85 ಪರ್ಸೆಂಟ್ ಚಾರ್ಜ್ ಆಗುತ್ತಿದ್ದಂತಯೇ ಚಾರ್ಜಿಂಗ್ನ್ನು ಬಂದ್ ಮಾಡಿ.
ಇನ್ನು ಕೆಲ ಮಂದಿ ಫೋನ್ ಬ್ಯಾಟರಿ ಪೂರ್ತಿ ಖಾಲಿಯಾದ ಬಳಿಕವೇ ಚಾರ್ಜಿಂಗ್ಗೆ ಹಾಕ್ತಾರೆ. ಹಾಗೂ 100 ಪರ್ಸೆಂಟ್ ಚಾರ್ಜಿಂಗ್ ಬಳಿಕ ಮತ್ತೆ ಮೊಬೈಲ್ ಬ್ಯಾಟರಿ ಡೆಡ್ ಆಗುವವರೆಗೂ ಬಳಕೆ ಮಾಡ್ತಾರೆ. ಆದರೆ ಈ ಅಭ್ಯಾಸ ಕೂಡ ತಪ್ಪು. ಮೊಬೈಲ್ ಬ್ಯಾಟರಿ 20 ಪರ್ಸೆಂಟ್ಗೆ ಬರ್ತಿದ್ದಂತೆಯೇ ಮೊಬೈಲ್ ಬ್ಯಾಟರಿಯನ್ನ ಚಾರ್ಜ್ ಮಾಡಿ. 80 ಪ್ರತಿಶತಕ್ಕೆ ಬಂದ್ ಮಾಡಿ.
ಮೊಬೈಲ್ ಫೋನ್ ಚಾರ್ಜಿಂಗ್ನಲ್ಲಿ ಇರುವ ವೇಳೆಯಲ್ಲೇ ಮೊಬೈಲ್ ಫೋನ್ ಬಳಕೆ ಮಾಡಬೇಡಿ. ಬೇಕಿದ್ದರೆ ಮೊಬೈಲ್ ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿ. ಸ್ವಿಚ್ ಆಫ್ ಮಾಡೋದು ಅಸಾಧ್ಯ ಎನಿಸಿದ್ರೆ ಕೊನೆ ಪಕ್ಷ ಚಾರ್ಜಿಂಗ್ ವೇಳೆ ಮೊಬೈಲ್ನ್ನು ಬಳಕೆ ಮಾಡದಿರಿ. ಚಾರ್ಜಿಂಗ್ ವೇಳೆ ವಿಡಿಯೋ ನೋಡೋದು, ಗೇಮ್ಸ್ ಆಡೋದು ಇಲ್ಲವೇ ಯಾರಿಗಾದರೂ ಕರೆ ಮಾತನಾಡೋದು ಇಂತಹ ಅಭ್ಯಾಸಗಳನ್ನ ಬಿಟ್ಟು ಬಿಡಿ.