alex Certify ತಡರಾತ್ರಿ ಸರಸದ ವೇಳೆಯಲ್ಲೇ ಸಿಕ್ಕಿಬಿದ್ದ ಪತ್ನಿ, ರೆಡ್ ಹ್ಯಾಂಡಾಗಿ ಹಿಡಿದು ಪ್ರಿಯಕರನ ಕೊಂದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡರಾತ್ರಿ ಸರಸದ ವೇಳೆಯಲ್ಲೇ ಸಿಕ್ಕಿಬಿದ್ದ ಪತ್ನಿ, ರೆಡ್ ಹ್ಯಾಂಡಾಗಿ ಹಿಡಿದು ಪ್ರಿಯಕರನ ಕೊಂದ ಪತಿ

ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಮಹಿಳೆಯ ಪತಿ ಕೊಲೆ ಮಾಡಿದ್ದಾನೆ. ಸುರೇಶ್(34) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ.

ಆರೋಪಿ ಮಲ್ಲಪ್ಪ(32) ನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಲಬುರ್ಗಿ ಮೂಲದ ಮಲ್ಲಪ್ಪ 11 ವರ್ಷದ ಹಿಂದೆ ಮದುವೆಯಾಗಿದ್ದು ಪತ್ನಿ, ಮೂವರು ಮಕ್ಕಳೊಂದಿಗೆ ದೇವೇಂದ್ರ ಲೇಔಟ್ ನಲ್ಲಿ ವಾಸವಾಗಿದ್ದಾರೆ. ಜೆಪಿ ನಗರದ ಸಿಮೆಂಟ್ ಮಳಿಗೆಯಲ್ಲಿ ದೇವೇಂದ್ರಪ್ಪ ಕೆಲಸ ಮಾಡುತ್ತಿದ್ದು ಅವರ ಪತ್ನಿ ಮನೆಗಳಿಗೆ ಕೆಲಸಕ್ಕೆ ಹೋಗುತ್ತಿದ್ದರು.

ಮಂಡ್ಯ ಜಿಲ್ಲೆಯ ಸುರೇಶ್ ಆಕೆಗೆ ಪರಿಚಯವಾಗಿದ್ದು ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಪತ್ನಿಯನ್ನು ರೆಡ್  ಹ್ಯಾಂಡಾಗಿ ಹಿಡಿಯಬೇಕೆಂದು ನಿರ್ಧರಿಸಿದ್ದ ಮಲ್ಲಪ್ಪ ಅಕ್ಟೋಬರ್ 16 ರಂದು 11.30 ಕ್ಕೆ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ತೆರಳಿದ್ದಾನೆ.

ಆತ ಹೊರ ಹೋಗುತ್ತಿದ್ದಂತೆ ಸುರೇಶ್ ಮನೆಗೆ ಆಗಮಿಸಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾನೆ. ಇದಾದ ಕೆಲವೇ ನಿಮಿಷದಲ್ಲಿ ಮಲ್ಲಪ್ಪ ಮನೆಗೆ ಆಗಮಿಸಿದ್ದಾನೆ. ಇದರಿಂದ ಬೆದರಿದ ಸುರೇಶ್ ಪಕ್ಕದ ಮನೆಯ ಮಹಡಿ ಮೇಲೆ ಅವಿತುಕೊಂಡಿದ್ದಾನೆ. ಮನೆ ಬಾಗಿಲು ತೆಗೆದ ಪತ್ನಿ ಮುಖದಲ್ಲಿ ಭಯ ಇರುವುದನ್ನು ಗಮನಿಸಿದ ಮಲ್ಲಪ್ಪ ಆಕೆಯ ಗೆಳೆಯ ಸುರೇಶ್ ಗಾಗಿ ಹುಡುಕಾಟ ನಡೆಸಿದ್ದಾನೆ. ಮಹಡಿಗೆ ತೆರಳಿ ನೋಡಿದಾಗ ಅಲ್ಲಿ ಸುರೇಶ್ ಕಂಡುಬಂದಿದ್ದು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...