alex Certify 3D ತಂತ್ರಜ್ಞಾನ ಬಳಸಿ ಶಿಕ್ಷಕರಿಂದ ಆನ್‌ ಲೈನ್ ಪಾಠ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3D ತಂತ್ರಜ್ಞಾನ ಬಳಸಿ ಶಿಕ್ಷಕರಿಂದ ಆನ್‌ ಲೈನ್ ಪಾಠ

Karnataka Teacher is Using Augmented Reality Tools to Give Science ...

ಬೆಳಗಾವಿ: ಸರ್ಕಾರಿ ಶಾಲೆ ಶಿಕ್ಷಕರೊಬ್ಬರು ಹೊಸ ತಲೆಮಾರಿನ ತಂತ್ರಜ್ಞಾನ ಬಳಸಿ ಪಾಠ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಭೂತರಾಮನಹಟ್ಟಿ ಸರ್ಕಾರಿ‌ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಸುಂಗಾರಿ ತ್ರಿ ಡಿ ತಂತ್ರಜ್ಞಾನ ಬಳಸಿ ವರ್ಚುವಲ್ ರಿಯಾಲಿಟಿ ತರಗತಿ ಕೋಣೆ ತಯಾರಿಸಿ ಪಾಠವನ್ನು ಹೆಚ್ಚು ಆಕರ್ಷಕವಾಗಿ ಮಾಡಿದ್ದಾರೆ.

ಮೊಬೈಲ್ ಗೇಮ್ ಡೆವಲಪ್ಮೆಂಟ್ ಆ್ಯಪ್ ಅರ್ಲೂಪಾ ಬಳಸಿ, ಸೂರ್ಯ ಗ್ರಹಣ, ಚಂದ್ರ ಗ್ರಹಣ‌ ಸೌರ ವ್ಯೂಹ, ಗ್ಯಾಲೆಕ್ಸಿ, ಮುಂತಾದ ವಿಷಯಗಳ ಬಗ್ಗೆ ಕನ್ನಡದಲ್ಲಿ ಸೊಗಸಾಗಿ ಬೋಧನೆ ಮಾಡಿ ವಿಡಿಯೋ ಮಾಡಿದ್ದಾರೆ.

ರಸಾಯನಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ, ವಿಷಯಗಳನ್ನು, ಈ ರೀತಿ ಅವರು ಬೋಧನೆ ಮಾಡಿದ್ದಾರೆ. ಆನೆ, ಸೌರ ಮಂಡಲದ‌ ಕುರಿತ ವಿಡಿಯೋಗಳನ್ನು ನಮ್ಮೂರ ಸರ್ಕಾರಿ ಶಾಲೆ‌ ಬೂತ್ರಾಮನಹಟ್ಟಿ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

https://www.facebook.com/permalink.php?story_fbid=1296041827393462&id=100009629721584

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...