ಮಂಗಳೂರಿನ ಬಂದರಿನಲ್ಲಿ ಮೀನುಗಾರರೊಬ್ಬರ ಬಲೆಗೆ ಬರೋಬ್ಬರಿ 750 ಕೆಜಿ ಹಾಗೂ 250 ಕೆಜಿ ಬೃಹಾದಾಕಾರ ಮೀನುಗಳು ಬಿದ್ದಿವೆ.
ಸುಭಾಷ್ ಸೈಲಾನ್ ಎಂಬ ಮೀನುಗಾರರ ಈ ಬೃಹಾದಾಕಾರದ ಮೀನುಗಳನ್ನ ಬಲೆಗೆ ಕೆಡವಿದ್ದಾರೆ. ಬೃಹದಾಕಾರದ ಮೀನುಗಳನ್ನ ಕ್ರೇನ್ ಸಹಾಯದಿಂದ ಎತ್ತಿ ಬಳಿಕ ಟ್ರಕ್ಗೆ ಹಾಕಲಾಗಿದೆ. ದೊಡ್ಡ ಮೀನುಗಳನ್ನ ನೋಡೋಕೆ ಬಂದರಿನಲ್ಲಿ ಜನಸ್ತೋಮನವೇ ಹರಿದಿತ್ತು.
ಇನ್ನು ಈ ವಿಚಾರವಾಗಿ ಮಾತನಾಡಿದ ಕರಾವಳಿ ಕರ್ನಾಟಕ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಯತೀಶ್ ಬೈಕಂಪಾಡಿ, ಈ ರೀತಿಯ ದೊಡ್ಡ ಗಾತ್ರದ ಮೀನು ಬಲೆಗೆ ಬಿದ್ದಿದ್ದು ಇದೇ ಮೊದಲೇನಲ್ಲ. ಮಲ್ಪೆಯಲ್ಲೂ ಕೂಡ ಕೆಲದಿನಗಳ ಹಿಂದಷ್ಟೇ ದೊಡ್ಡ ಮೀನೊಂದು ಬಲೆಗೆ ಬಿದ್ದಿತ್ತು. ಆದರೆ ಅದು ಸುದ್ದಿಯಾಗಲಿಲ್ಲ. ಇದು ದೊಡ್ಡ ಬಂದರಾದ್ದರಿಂದ ಮೀನಿನ ಫೋಟೋ ತೆಗೆದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹೀಗಾಗಿ ಇದು ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿದೆ ಅಂತಾ ಹೇಳಿದ್ರು.