alex Certify ಕರ್ನಾಟಕದ ರೈತನ ಸಾಧನೆ ಮೆಚ್ಚಿ ಕೊಂಡಾಡಿದ ಮಾಜಿ ಕ್ರಿಕೆಟಿಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕದ ರೈತನ ಸಾಧನೆ ಮೆಚ್ಚಿ ಕೊಂಡಾಡಿದ ಮಾಜಿ ಕ್ರಿಕೆಟಿಗ

ಮನೆಗೆ ವಿದ್ಯುತ್​ ಪೂರೈಕೆ ಮಾಡಲು ವಿಶಿಷ್ಟವಾದ ವಾಟರ್‌ ಮಿಲ್ ರಚಿಸಿದ್ದಕ್ಕಾಗಿ ಕರ್ನಾಟಕದ ರೈತರೊಬ್ಬರು ನೆಟ್ಟಿಗರ ಮನ ಗೆದ್ದಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿ.ವಿ.ಎಸ್.​ ಲಕ್ಷ್ಮಣ್​ ಕೂಡ ರೈತನ ಸಾಧನೆಯನ್ನ ಪ್ರಶಂಸಿಸಿದ್ದಾರೆ.

ಕಾಲುವೆಯಲ್ಲಿ ನೀರು ಹರಿಯುವಾಗ 150 ವ್ಯಾಟ್​ ವಿದ್ಯುತ್​ ಉತ್ಪಾದನೆ ಮಾಡಬಲ್ಲ ಸುಸ್ಥಿರ ವಾಟರ್‌ ಮಿಲ್ ವಿನ್ಯಾಸಗೊಳಿಸಲು ರೈತ ಸಿದ್ದಪ್ಪ ಪ್ಲಾಸ್ಟಿಕ್​ ಟಬ್​ ಹಾಗೂ ಮರ ಬಳಸಿದ್ದಾರೆ. ಹುಬ್ಬಳ್ಳಿ ವಿದ್ಯುತ್​ ಸರಬರಾಜು ಕಂಪನಿ ಲಿಮಿಟೆಡ್​ ಸಿದ್ದಪ್ಪ ಮನೆಗೆ ವಿದ್ಯುತ್​ ಪೂರೈಕೆ ಮಾಡಲು ನಿರಾಕರಿಸಿದ ನಂತರ ಸಿದ್ದಪ್ಪ ಈ ವಾಟರ್​ ಮಿಲ್ ನಿರ್ಮಾಣಕ್ಕೆ ಮುಂದಾದರು.

ನರಗುಂದ ಬೆಟ್ಟಗಳಲ್ಲಿದ್ದ ವಾಟರ್​ ಮಿಲ್​ಗಳ ಕಾರ್ಯ ವಿಧಾನದಿಂದ ಪ್ರೇರಣೆ ಪಡೆದ ಸಿದ್ದಪ್ಪ ವಿದ್ಯುತ್​ ಉತ್ಪಾದಿಸಲು ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನ ತಂದಿದ್ದಾರೆ. ಈ ವಿಚಾರವನ್ನ ಸ್ವತಃ ವಿವಿಎಸ್​ ಲಕ್ಷ್ಮಣ್​​ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಸಿದ್ದಪ್ಪ ನೀರಿನ ಗಿರಣಿಯನ್ನ ವಿನ್ಯಾಸಗೊಳಿಸಿ ತನ್ನ ಮನೆಯ ಸಮೀಪದ ಕಾಲುವೆಯಿಂದ ವಿದ್ಯುತ್​ ಉತ್ಪಾದನೆ ಮಾಡಿದ್ದಾರೆ. ಆದರೆ ಕಾಲುವೆಯಲ್ಲಿ ಕೆಲವೇ ತಿಂಗಳುಗಳ ಕಾಲ ನೀರು ಸಿಗೋದ್ರಿಂದ ಸಿದ್ದಪ್ಪನಿಗೆ ಸಂಕಷ್ಟ ತಪ್ಪಿದ್ದಲ್ಲ ಎಂದು ಲಕ್ಷ್ಮಣ್​ ಬರೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...