alex Certify ʼಸೆಲ್ಫಿʼ ತೆಗೆದುಕೊಳ್ಳಲು ಹೋದ ಬಾಲಕನಿಗೆ ಕರೆಂಟ್​ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೆಲ್ಫಿʼ ತೆಗೆದುಕೊಳ್ಳಲು ಹೋದ ಬಾಲಕನಿಗೆ ಕರೆಂಟ್​ ಶಾಕ್

ಈಗಿನ ಸೋಶಿಯಲ್​ ಮೀಡಿಯಾ ಜಮಾನದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಸೆಲ್ಫಿ ಕ್ರೇಜ್​ ಇದ್ದೇ ಇರುತ್ತೆ. ಆದರೆ ಈ ಸೆಲ್ಫಿ ಹುಚ್ಚಾಟದಿಂದ ಅನೇಕರು ತಮ್ಮ ಜೀವಕ್ಕೆ ಕಂಟಕ ತಂದುಕೊಳ್ತಾರೆ.

ಮಂಗಳೂರಿನಲ್ಲಿ 16 ವರ್ಷದ ಬಾಲಕ ಬುಧವಾರ ಸ್ಟೇಷನರಿ ಗೂಡ್ಸ್​ ಟ್ರೇನ್​ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ವಿದ್ಯುತ್​ ಶಾಕ್​ ಹೊಡೆದಿದ್ದು ಪರಿಣಾಮ ಆತನ ದೇಹ ಸುಟ್ಟು ಹೋಗಿದ್ದು ಬಾಲಕನ ಸ್ಥಿತಿ ಗಂಭೀರವಾಗಿದೆ.

ಮಂಗಳೂರಿನ ಜೋಕಟ್ಟೆ ರಸ್ತೆ ಸಂಖ್ಯೆ 04ರಲ್ಲಿ ಈ ಅವಘಡ ಸಂಭವಿಸಿದೆ. ಗಾಯಗೊಂಡ ಬಾಲಕನನ್ನ ಮೊಹಮ್ಮದ್​ ದಿಶಾನ್​ ಎಂದು ಗುರುತಿಸಲಾಗಿದೆ. ಈತ ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ಗೂಡ್ಸ್​ ಟ್ರೇನ್​ನ್ನು ಹತ್ತಿದ್ದ. ರೈಲಿನ ಬೋಗಿಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವ ವೇಳೆ 25 ಸಾವಿರ ವೋಲ್ಟ್ ಕರೆಂಟ್​ ಹೊಡೆದಿದ್ದರಿಂದ ಬಾಲಕ ಕೆಳಗೆ ಬಿದ್ದಿದ್ದಾನೆ.

ದಿಶಾನ್​​ನನ್ನ ಕೂಡಲೇ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಈತನನ್ನ ತುರ್ತು ನಿಗಾ ಘಟಕದಲ್ಲಿ ಇಡಲಾಗಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...