alex Certify ಮೇ 12 ರಂದು ಖಗೋಳದಲ್ಲಿ ಸಂಭವಿಸಲಿದೆ ಕೌತುಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇ 12 ರಂದು ಖಗೋಳದಲ್ಲಿ ಸಂಭವಿಸಲಿದೆ ಕೌತುಕ

ಲಾಕ್ ಡೌನ್ ಕಾರಣದಿಂದ ಮಾಲಿನ್ಯ ಪ್ರಮಾಣ ಇಳಿಕೆಯಾಗಿದೆ, ಹೀಗಾಗಿ ನಕ್ಷತ್ರಪುಂಜಗಳನ್ನು ಗುರುತಿಸುವುದು ಈ ವೇಳೆ ಕಷ್ಟಸಾಧ್ಯವಲ್ಲ ಎಂಬ ಮಾತಿದೆ.

ಇದೇ ವೇಳೆ ಖಗೋಳದಲ್ಲಿ ಕೌತುಕವೊಂದು ನಡೆಯಲಿದ್ದು, ಅದನ್ನು ಕಣ್ತುಂಬಿಕೊಳ್ಳಲು ಅವಕಾಶ ಎದುರಾಗಿದೆ.

ಕಳೆದ ತಿಂಗಳು ಗುರು, ಶನಿ, ಮಂಗಳ ಮತ್ತು ಚಂದ್ರ ಗ್ರಹವನ್ನು ಮೂರು ದಿನಗಳ ಕಾಲ ಒಟ್ಟಿಗೆ ವೀಕ್ಷಿಸಬಹುದಾದ ಅವಕಾಶವಿತ್ತು. ಈಗ ಚಂದ್ರ ಹಾಗೂ ಗುರು ಗ್ರಹವನ್ನು ಒಟ್ಟಿಗೆ ವೀಕ್ಷಿಸುವ ಅವಕಾಶ ಲಭಿಸಿದ್ದು, ದೂರದರ್ಶಕದ ಅವಶ್ಯಕತೆ ಕೂಡ ಇಲ್ಲ.

ಮೇ 12ರ ಬೆಳಗಿನ‌ ಜಾವ ಚಂದ್ರ ಮತ್ತು ಗುರು ಗ್ರಹ ಅತಿ ನಿಕಟ ಮುಖಾಮುಖಿಯಾಗಲಿವೆ. ಹೀಗಾಗಿ ಎರಡು ಗ್ರಹಗಳನ್ನು ಒಟ್ಟಿಗೆ ನೋಡಲು ಸಾಧ್ಯವಾಗುತ್ತದೆ.

ಮಧ್ಯರಾತ್ರಿಯ ನಂತರ ಪ್ರಕ್ರಿಯೆ ಆರಂಭವಾಗಿ, ದಕ್ಷಿಣ ಆಗ್ನೇಯ ಭಾಗದಲ್ಲಿ ಮುಖಾಮುಖಿಯನ್ನು ವೀಕ್ಷಿಸಬಹುದು. ಬೈನ್ಯಾಕ್ಯುಲರ್ ಅಥವಾ ಬರಿಗಣ್ಣಿನಿಂದಲೂ ಈ ಕೌತುಕ ವೀಕ್ಷಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...