alex Certify ಭಾರತೀಯ ಯೋಧರಿಂದ ವಿಶ್ವ ದಾಖಲೆ ನಿರ್ಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಯೋಧರಿಂದ ವಿಶ್ವ ದಾಖಲೆ ನಿರ್ಮಾಣ

ಭಾರತೀಯ ಸೇನೆಯ ಸೇನಾ ಸೇವಾ ದಳದ ಮೋಟಾರ್​ ಸೈಕಲ್​ ಪ್ರದರ್ಶನ ತಂಡ ಅಗ್ನಿ ಸುರಂಗದಲ್ಲಿ ಅತಿ ಹೆಚ್ಚು ದೂರ ಸವಾರಿ ಮಾಡುವ ಮೂಲಕ ಸಾಧನೆ ಮಾಡಿದೆ. ಬೆಂಗಳೂರಿನ ಎಸ್​ಸಿ ಮೈದಾನದಲ್ಲಿ ರೈಡರ್​ ಕ್ಯಾಪ್ಟನ್​ ಶಿವಂ ಸಿಂಗ್​ 127 ಮೀಟರ್​​ ಬೆಂಕಿ ಸುರಂಗದಲ್ಲಿ ಬೈಕ್​ ಚಲಾಯಿಸಿ ಸಾಧನೆ ಮಾಡಿದ್ರು.

ಕ್ಯಾಪ್ಟನ್​ ಶಿವಂ ಚಲಾಯಿಸಿದ ಬೈಕ್​ ಸಂಪೂರ್ಣವಾಗಿ ನಾಶವಾಗಿದೆ. ಹಾಗೂ ಸಿಂಗ್​ರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕೂಡಲೇ ಅವರನ್ನ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯ್ತು. ದಕ್ಷಿಣ ಆಫ್ರಿಕಾದ ಎನ್ರಿಕೋ ಸ್ಕೋಮನ್​ ಹಾಗೂ ಆಂಡ್ರೆ ಡಿ ಕಾಕ್​ 2014ರಲ್ಲಿ ಪ್ಯಾರಿಸ್​ನಲ್ಲಿ ಈ ಹಿಂದೆ ಉದ್ದದ ಬೆಂಕಿ ಸುರಂಗದಲ್ಲಿ ಬೈಕ್​ ಚಲಾಯಿಸಿ ಸಾಧನೆ ಮಾಡಿದ್ದರು.

ಕ್ಯಾಪ್ಟನ್​ ಶಿವಂರ ಸುಂಟರಗಾಳಿ ತಂಡವನ್ನ 1982ರಲ್ಲಿ ಕರ್ನಲ್​​ ಸಿ.ಎನ್​ ರಾವ್​ ಹಾಗೂ ಕ್ಯಾಪ್ಟನ್​ ಜೆ.ಪಿ ಶರ್ಮಾ ನೇತೃತ್ವದಲ್ಲಿ ಸ್ಥಾಪಿಸಲಾಗಿತ್ತು. ಈ ಸುಂಟರಗಾಳಿ ತಂಡ ಈವರೆಗೆ ಭಾರತದಲ್ಲಿ 1,000ಕ್ಕೂ ಹೆಚ್ಚು ಸಾಹಸವನ್ನ ಪ್ರದರ್ಶಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...