ಭಾರತೀಯ ಸೇನೆಯ ಸೇನಾ ಸೇವಾ ದಳದ ಮೋಟಾರ್ ಸೈಕಲ್ ಪ್ರದರ್ಶನ ತಂಡ ಅಗ್ನಿ ಸುರಂಗದಲ್ಲಿ ಅತಿ ಹೆಚ್ಚು ದೂರ ಸವಾರಿ ಮಾಡುವ ಮೂಲಕ ಸಾಧನೆ ಮಾಡಿದೆ. ಬೆಂಗಳೂರಿನ ಎಸ್ಸಿ ಮೈದಾನದಲ್ಲಿ ರೈಡರ್ ಕ್ಯಾಪ್ಟನ್ ಶಿವಂ ಸಿಂಗ್ 127 ಮೀಟರ್ ಬೆಂಕಿ ಸುರಂಗದಲ್ಲಿ ಬೈಕ್ ಚಲಾಯಿಸಿ ಸಾಧನೆ ಮಾಡಿದ್ರು.
ಕ್ಯಾಪ್ಟನ್ ಶಿವಂ ಚಲಾಯಿಸಿದ ಬೈಕ್ ಸಂಪೂರ್ಣವಾಗಿ ನಾಶವಾಗಿದೆ. ಹಾಗೂ ಸಿಂಗ್ರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕೂಡಲೇ ಅವರನ್ನ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯ್ತು. ದಕ್ಷಿಣ ಆಫ್ರಿಕಾದ ಎನ್ರಿಕೋ ಸ್ಕೋಮನ್ ಹಾಗೂ ಆಂಡ್ರೆ ಡಿ ಕಾಕ್ 2014ರಲ್ಲಿ ಪ್ಯಾರಿಸ್ನಲ್ಲಿ ಈ ಹಿಂದೆ ಉದ್ದದ ಬೆಂಕಿ ಸುರಂಗದಲ್ಲಿ ಬೈಕ್ ಚಲಾಯಿಸಿ ಸಾಧನೆ ಮಾಡಿದ್ದರು.
ಕ್ಯಾಪ್ಟನ್ ಶಿವಂರ ಸುಂಟರಗಾಳಿ ತಂಡವನ್ನ 1982ರಲ್ಲಿ ಕರ್ನಲ್ ಸಿ.ಎನ್ ರಾವ್ ಹಾಗೂ ಕ್ಯಾಪ್ಟನ್ ಜೆ.ಪಿ ಶರ್ಮಾ ನೇತೃತ್ವದಲ್ಲಿ ಸ್ಥಾಪಿಸಲಾಗಿತ್ತು. ಈ ಸುಂಟರಗಾಳಿ ತಂಡ ಈವರೆಗೆ ಭಾರತದಲ್ಲಿ 1,000ಕ್ಕೂ ಹೆಚ್ಚು ಸಾಹಸವನ್ನ ಪ್ರದರ್ಶಿಸಿವೆ.