ಬೀದಿ ತುಂಬೆಲ್ಲ ಗುಲಾಬಿ ಬಣ್ಣದ ಹೂವಿರುವ ಮರಗಳು, ರಸ್ತೆಯ ಮೇಲೆಲ್ಲ ಬಿದ್ದ ಹೂಗಳು ಇಂತಹ ದೃಶ್ಯಗಳು ಇರುವ ಫೋಟೋಗಳನ್ನ ನೋಡ್ತಿದ್ರೆ ಜಪಾನ್ ನಿಮಗೆ ಥಟ್ಟಂತ ನೆನಪಾಗುವ ಹೆಸರು.
ಆದರೆ ಈ ಗುಲಾಬಿ ಸ್ವರ್ಗ ಕೇವಲ ಜಪಾನ್ನಲ್ಲಿ ಮಾತ್ರವಲ್ಲದೇ ಕರ್ನಾಟಕದಲ್ಲೂ ಅದರಲ್ಲೂ ಬೆಂಗಳೂರಿನಲ್ಲಿ ಕಾಣಸಿಗ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರಿನ ನಯನಮನೋಹರ ನೋಟ ಕಣ್ಣಿಗೆ ಹಬ್ಬದೂಟವನ್ನೇ ನೀಡ್ತಿದೆ.
ನಾನು ಬೆಂಗಳೂರಿನಲ್ಲಿ ಕಳೆಯುವ ಅತ್ಯಂತ ಸಂತಸಮಯ ಸಮಯವಿದು ಎಂದು ಮೋನಿಕಾ ಮಂಚಂದಾ ಬರೆದುಕೊಂಡಿದ್ದಾರೆ.
ಟ್ವಿಟರ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳಲ್ಲಿ ಸರುಕಾ ಚೆರ್ರಿ ಹೂವಿನ ಫೋಟೋಗಳನ್ನ ವ್ಯಾಪಕವಾಗಿ ಹಂಚಿಕೊಳ್ಳಲಾಗ್ತಿದೆ.
https://www.instagram.com/p/CMms0eDnhh3/?utm_source=ig_web_copy_link