alex Certify ಟ್ರಂಪ್​ ಖಾತೆ ಶಾಶ್ವತವಾಗಿ ಬ್ಯಾನ್​ ಮಾಡಿದ ಟ್ವಿಟರ್ ವಿರುದ್ಧ ತೇಜಸ್ವಿ ಸೂರ್ಯ ಕೆಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಂಪ್​ ಖಾತೆ ಶಾಶ್ವತವಾಗಿ ಬ್ಯಾನ್​ ಮಾಡಿದ ಟ್ವಿಟರ್ ವಿರುದ್ಧ ತೇಜಸ್ವಿ ಸೂರ್ಯ ಕೆಂಡ

ಡೊನಾಲ್ಡ್ ಟ್ರಂಪ್​ರ ಟ್ವಿಟರ್ ಖಾತೆಯನ್ನ ಶಾಶ್ವತವಾಗಿ ನಿಷ್ಕ್ರಿಯಗೊಳಿಸಿದ ಟ್ವಿಟರ್​ ಸಂಸ್ಥೆಯ ಕ್ರಮವನ್ನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಖಂಡಿಸಿದ್ದಾರೆ.

ಟ್ವಿಟರ್​ ಯಾರನ್ನೂ ಈ ರೀತಿ ಬ್ಯಾನ್​ ಮಾಡೋದು ಸರಿಯಲ್ಲ ಅಂತಾ ಅಭಿಪ್ರಾಯ ಹೊರಹಾಕಿದ್ದಾರೆ.

ಟ್ರಂಪ್​ ಖಾತೆಯನ್ನ ಟ್ವಿಟರ್ ಶಾಶ್ವತವಾಗಿ ನಿಷ್ಕ್ರಿಯಗೊಳಿಸಿದ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ಶ್ರೀವತ್ಸ, ತೇಜಸ್ವಿ ಸೂರ್ಯ ಹಾಗೂ ಅಮಿತ್​ ಮಾಳವೀಯ ಟ್ವಿಟರ್​ ಖಾತೆಗಳ ವಿರುದ್ಧವೂ ಇದೇ ರೀತಿ ಕ್ರಮವನ್ನ ಕೈಗೊಳ್ಳಬೇಕು ಅಂತಾ ಟ್ವಿಟರ್​ನಲ್ಲಿ ಆಗ್ರಹಿಸಿದ್ದರು.

ಇದಕ್ಕೆ ಟ್ವಿಟರ್​ನಲ್ಲೇ ಪ್ರತ್ಯುತ್ತರ ನೀಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಯಾರದ್ದೇ ಖಾತೆಯನ್ನಾಗಲಿ ಟ್ವಿಟರ್ ಬ್ಯಾನ್​ ಮಾಡಬಾರದು. ಕಾಂಗ್ರಸ್ಸಿನವರಾಗಲಿ ಬಿಜೆಪಿಯವರಾಗಲಿ ಯಾರ ವಿರುದ್ಧವೂ ಇಂತಹ ಕ್ರಮ ಸರಿಯಲ್ಲ. ಟ್ರಂಪ್​ ಖಾತೆಯನ್ನ ನಿಷೇಧಿಸಿರೋದು ಪ್ರಜಾಪ್ರಭುತ್ವಕ್ಕೆ ಎಚ್ಚರಿಕೆಯ ಕರೆಯಾಗಿದೆ ಅಂತಾ ಟ್ವೀಟಾಯಿಸಿದ್ದಾರೆ.

— Tejasvi Surya (@Tejasvi_Surya) January 9, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...