
ಟ್ವಿಟರ್ ಯಾರನ್ನೂ ಈ ರೀತಿ ಬ್ಯಾನ್ ಮಾಡೋದು ಸರಿಯಲ್ಲ ಅಂತಾ ಅಭಿಪ್ರಾಯ ಹೊರಹಾಕಿದ್ದಾರೆ.
ಟ್ರಂಪ್ ಖಾತೆಯನ್ನ ಟ್ವಿಟರ್ ಶಾಶ್ವತವಾಗಿ ನಿಷ್ಕ್ರಿಯಗೊಳಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಶ್ರೀವತ್ಸ, ತೇಜಸ್ವಿ ಸೂರ್ಯ ಹಾಗೂ ಅಮಿತ್ ಮಾಳವೀಯ ಟ್ವಿಟರ್ ಖಾತೆಗಳ ವಿರುದ್ಧವೂ ಇದೇ ರೀತಿ ಕ್ರಮವನ್ನ ಕೈಗೊಳ್ಳಬೇಕು ಅಂತಾ ಟ್ವಿಟರ್ನಲ್ಲಿ ಆಗ್ರಹಿಸಿದ್ದರು.
ಇದಕ್ಕೆ ಟ್ವಿಟರ್ನಲ್ಲೇ ಪ್ರತ್ಯುತ್ತರ ನೀಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಯಾರದ್ದೇ ಖಾತೆಯನ್ನಾಗಲಿ ಟ್ವಿಟರ್ ಬ್ಯಾನ್ ಮಾಡಬಾರದು. ಕಾಂಗ್ರಸ್ಸಿನವರಾಗಲಿ ಬಿಜೆಪಿಯವರಾಗಲಿ ಯಾರ ವಿರುದ್ಧವೂ ಇಂತಹ ಕ್ರಮ ಸರಿಯಲ್ಲ. ಟ್ರಂಪ್ ಖಾತೆಯನ್ನ ನಿಷೇಧಿಸಿರೋದು ಪ್ರಜಾಪ್ರಭುತ್ವಕ್ಕೆ ಎಚ್ಚರಿಕೆಯ ಕರೆಯಾಗಿದೆ ಅಂತಾ ಟ್ವೀಟಾಯಿಸಿದ್ದಾರೆ.