alex Certify ಲಾಕ್ ಡೌನ್ ನಡುವೆ ಚಿಕನ್, ಮಾಂಸ ಪ್ರಿಯರಿಗೆ ‘ಗುಡ್ ನ್ಯೂಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ನಡುವೆ ಚಿಕನ್, ಮಾಂಸ ಪ್ರಿಯರಿಗೆ ‘ಗುಡ್ ನ್ಯೂಸ್’

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮನೆಬಾಗಿಲಿಗೆ ಮಾಂಸ ಮತ್ತು ಮಾಂಸದ ಖಾದ್ಯ ಪದಾರ್ಥಗಳ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಸಂಚಾರ ಮಾರಾಟ ಮಳಿಗೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಮಾಂಸದ ಖಾದ್ಯ ಮತ್ತು ಗುಣಮಟ್ಟದ ಮಾಂಸ, ಚಿಕನ್ ಪೂರೈಕೆ ಮಾಡಲಾಗುವುದು. ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಮತ್ತು ರಂಜಾನ್ ವ್ರತಾಚರಣೆ ಆರಂಭವಾದ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗುವಂತೆ ಸಂಚಾರಿ ಮಾಂಸ ಮತ್ತು ಮಾಂಸ ಖಾದ್ಯಗಳ ಮಾರಾಟ ಮಳಿಗೆ ಆರಂಭಿಸಲಾಗಿದೆ.

ಮಟನ್ ಕೆಜಿಗೆ 700 ರೂ. ಮತ್ತು ಚಿಕನ್ ಕೆಜಿಗೆ 220 ರೂಪಾಯಿ ನಿಗದಿಪಡಿಸಿದ್ದು ಮುಂದಿನ ದಿನಗಳಲ್ಲಿ ದರ ಕಡಿತಗೊಳಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗುವುದು. ‘ಮೀಟ್ ಆನ್ ವೀಲ್ಸ್’ ಮಾಂಸ ಮತ್ತು ಮಾಂಸದಿಂದ ತಯಾರಿಸಿದ ಖಾದ್ಯ ಪದಾರ್ಥಗಳ ಸಂಚಾರಿ ಮಾರಾಟ ಮಳಿಗೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಆರಂಭಿಸಲಾಗಿದೆ. ಆರಂಭಿಕ ಹಂತದಲ್ಲಿ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಸಂಚಾರ ಮಾರಾಟ ಮಳಿಗೆ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಧಾರವಾಡಕ್ಕೂ ವಿಸ್ತರಿಸಲಾಗುವುದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...