alex Certify HDK ಇಸ್ಪೀಟ್ ಫೋಟೋ ರಿಲೀಸ್ ಮಾಡುತ್ತೇನೆ: ಹೊಸ ಬಾಂಬ್ ಸಿಡಿಸಿದ ಯೋಗೀಶ್ವರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

HDK ಇಸ್ಪೀಟ್ ಫೋಟೋ ರಿಲೀಸ್ ಮಾಡುತ್ತೇನೆ: ಹೊಸ ಬಾಂಬ್ ಸಿಡಿಸಿದ ಯೋಗೀಶ್ವರ್

ಬೆಂಗಳೂರು: ಸಚಿವ ಸಿ.ಪಿ.ಯೋಗೇಶ್ವರ್ ರ್ಓರ್ವ ಬಚ್ಚಾ, ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದವನು ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಯೋಗೀಶ್ವರ್, ಹೌದು. ನಾನು ಬಚ್ಚಾ. ರಾಜಕೀಯವಾಗಿ ನಾನು ಬಚ್ಚಾನೇ. ರಾಮನಗರಕ್ಕೆ ಬಂದಾಗ ಕುಮಾರಸ್ವಾಮಿ ಕೂಡ ಬಚ್ಚಾ ಆಗಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯೋಗೇಶ್ವರ್, ನನಗೆ ನನ್ನ ಪಾರ್ಟಿಯ ಸಿದ್ಧಾಂತ ಎಂಬುದಿದೆ. ಆದರೆ ಕುಮಾರಸ್ವಾಮಿಗೆ ಹಾಗಲ್ಲ. ಅವರಿಗೆ ಯಾವುದೇ ಸಿದ್ಧಾಂತಗಳಿಲ್ಲ. ಯಾವ ಪಾರ್ಟಿಗೆ ಬೇಕಾದರೂ ಅಡ್ಜಸ್ಟ್ ಆಗ್ತಾರೆ. ಹಾಗಾಗಿ ಅವರೊಬ್ಬ ಜೋಕರ್ ತರಹ ಎಂದು ಹೇಳಿದ್ದಾಗಿ ಸ್ಪಷ್ಟನೆ ನೀಡಿದರು.

ಹೆಚ್.ಡಿ.ಕೆ. ಏನು ಎಂಬುದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಅದಕ್ಕಾಗಿ ಅವರ ಬಗ್ಗೆ ನನಗೆ ಗೊತ್ತಾಗಿದೆ. ಅಧಿಕಾರ ಇದ್ದಾಗ ಅವರೊಬ್ಬ ಸ್ವಾರ್ಥ ರಾಜಕಾರಣಿ. ಮತದಾರರನ್ನು ಜೀತದಾಳುಗಳಂತೆ ಬಳಸಿಕೊಳ್ಳುತ್ತಾರೆ ಎಂದು ಆರೋಪಿಸಿದರು.

ಇದೇ ವೇಳೆ ಇಸ್ಪೀಟ್ ಹಣದಲ್ಲಿ, ಜೂಜಾಟದ ಹಣದಲ್ಲಿ ಸರ್ಕಾರ ನಡೆಸುತ್ತಿದ್ದಾರೆ ಎಂಬ ಹೆಚ್. ಡಿ. ಕೆ. ಹೇಳಿಕೆಗೆ ಕಿಡಿಕಾರಿದ ಯೋಗೀಶ್ವರ್, ಕುಮಾರಸ್ವಾಮಿ ಕೂಡ ಇಸ್ಪೀಟ್ ಆಡುತ್ತಾರೆ. ಕುಮಾರಸ್ವಾಮಿ ಇಲ್ಲಲ್ಲ ಸಿಂಗಾಪುರ, ಮಲೇಶಿಯಾದಲ್ಲಿ ಇಸ್ಪೀಟ್ ಆಡೋ ಫೋಟೋಗಳು ನನ್ನ ಹತ್ರ ಇದೆ. ಅವಶ್ಯಕತೆ ಬಂದಾಗ ಆ ಫೋಟೋ ಬಿಡುಗಡೆ ಮಾಡ್ತೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...