alex Certify ರಾಸಾಯನಿಕ ಬಳಸಿ ಕೃತಕವಾಗಿ ಮಾವಿನ ಹಣ್ಣು ಮಾಡಿ ಮಾರಾಟ, ಹಣ್ಣು ಪ್ರಿಯರಿಗೆ ಇಲ್ಲಿದೆ ʼಮುಖ್ಯ ಮಾಹಿತಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಸಾಯನಿಕ ಬಳಸಿ ಕೃತಕವಾಗಿ ಮಾವಿನ ಹಣ್ಣು ಮಾಡಿ ಮಾರಾಟ, ಹಣ್ಣು ಪ್ರಿಯರಿಗೆ ಇಲ್ಲಿದೆ ʼಮುಖ್ಯ ಮಾಹಿತಿʼ

ಹಾಸನ: ಜಿಲ್ಲೆಯಾದ್ಯಂತ ರಾಸಾಯನಿಕ (Calcium Carbide) ಬಳಸಿ ಕೃತಕವಾಗಿ ಮಾವಿನ ಕಾಯಿಗಳನ್ನು ಹಣ್ಣುಗಳಾಗಿ ಮಾಡಿ ಸಂಗ್ರಹಣೆ/ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಹಾಗಾಗಿ ವ್ಯಾಪಾರಸ್ಥರು ರಾಸಾಯನಿಕ (Calcium Carbide) ಬಳಸಿ ಕೃತಕವಾಗಿ ಮಾಡಿದ ಮಾವಿನ ಹಣ್ಣುಗಳನ್ನು ಸಂಗ್ರಹಣೆ/ಮಾರಾಟ ಮಾಡದಂತೆ ಹಾಗೂ ಸಾರ್ವಜನಿಕರು ರಾಸಾಯನಿಕ (Calcium Carbide) ಬಳಸಿ ಕೃತಕವಾಗಿ ಮಾಡಿದ ಮಾವಿನ ಹಣ್ಣುಗಳನ್ನು ಕೊಂಡುಕೊಳ್ಳದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ ಮತ್ತು ನಿಬಂಧನೆ 2011 ರ Prohibition and Restriction on sales of certain products 2.3.5 ಪ್ರಕಾರ ರಾಸಾಯನಿಕ (Calcium Carbide) ಬಳಸಿ ಕೃತಕವಾಗಿ ಮಾವಿನ ಹಣ್ಣುಗಳನ್ನು ಸಂಗ್ರಹಣೆ/ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಈ ನಿಯಮ ಉಲ್ಲಂಘನೆ ಮಾಡುವವರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಸೆಕ್ಷನ್ 58 ರ ಪ್ರಕಾರ ಎರಡು ಲಕ್ಷದವರೆಗೆ ದಂಡ ಹಾಗೂ ಸೆಕ್ಷನ್ 59 ರ ಪ್ರಕಾರ ಆರು ತಿಂಗಳುಗಳವರೆಗೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...