ಬೆಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಮಳಿಗೆಯಲ್ಲಿ ಭದ್ರತಾ ಕೆಲಸ ನಿರ್ವಹಿಸುವ ಮಹಿಳೆಗೆ ಮೇಲಧಿಕಾರಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಕೆಂಗೇರಿ ನಿವಾಸಿಯಾಗಿರುವ 38 ವರ್ಷದ ಮಹಿಳೆ ಪಟ್ಟಣಗೆರೆಯ ಮೆಡಿಕಲ್ ಮಳಿಗೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು ಅದೇ ಕಂಪನಿಯಲ್ಲಿ ಸೆಕ್ಯೂರಿಟಿ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನನ್ನೊಂದಿಗೆ ಬಾ ಪ್ರಮೋಷನ್ ಕೊಡಿಸುತ್ತೇನೆ ಎಂದು ಅಸಭ್ಯವಾಗಿ ವರ್ತಿಸಿದ್ದಾನೆ.
ಕೊಠಡಿಯನ್ನು ಸ್ವಚ್ಛ ಮಾಡುವ ವೇಳೆಯಲ್ಲಿ ಮೈಮುಟ್ಟಿ ಎಳೆದಾಡಿ ಕಿರುಕುಳ ನೀಡಿದ್ದು ಯಾರಿಗಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಎಚ್ಚರಿಕೆ ನೀಡಿದರೂ ಹಲವಾರು ಸಲ ಕಿರಕುಳ ನೀಡಿದ್ದು, ನೊಂದ ಮಹಿಳೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.