alex Certify ಅಂತ್ಯಕ್ರಿಯೆ ಸಿದ್ಧತೆ ವೇಳೆಯಲ್ಲೇ ನಡೆದಿದೆ ಅಚ್ಚರಿ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತ್ಯಕ್ರಿಯೆ ಸಿದ್ಧತೆ ವೇಳೆಯಲ್ಲೇ ನಡೆದಿದೆ ಅಚ್ಚರಿ ಘಟನೆ

ಕೋಮಾಗೆ ಜಾರಿದ್ದ ವೃದ್ಧೆ ಬದುಕುವ ಸಾಧ್ಯತೆ ಇಲ್ಲವೆಂದು ವೈದ್ಯರು ಹೇಳಿದ್ದರಿಂದ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ಸಿದ್ಧತೆಯಲ್ಲಿದ್ದಾಗಲೇ ಕುತೂಹಲದ ಘಟನೆ ಜರುಗಿದೆ.

ಸುಳ್ಯದ ಮರ್ಕಂಜ ಗ್ರಾಮದ ಪಟ್ಟೆಮನೆಯ ಹೇಮಾವತಿ ರೈ(80) ಕೋಮಾಕ್ಕೆ ಜಾರಿ ಸಾವಿನಂಚಿನಲ್ಲಿದ್ದು, ಅವರು ಬದುಕುವುದು ಕಷ್ಟವೆಂದು ಹೇಳಿದ್ದ ವೈದ್ಯರು ಮನೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ವೃದ್ಧೆಯ ಕುಟುಂಬದವರು, ಸಂಬಂಧಿಕರು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಸಾವಿನ ಕೊನೆಗಳಿಗೆಯಲ್ಲಿ ಹೇಮಾವತಿ ಚೇತರಿಸಿಕೊಂಡಿದ್ದಾರೆ.

ಅಸ್ವಸ್ಥರಾಗಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಕೋಮಾಕ್ಕೆ ಜಾರಿದ್ದ ಅವರು ಆಕ್ಸಿಜನ್ ತೆಗೆದರೆ ಉಳಿಯುವುದು ಕಷ್ಟ. ಅವರನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದಾರೆ. ಆಂಬುಲೆನ್ಸ್ ನಲ್ಲಿ ಮನೆಗೆ ಕರೆತರುವಾಗ ಅವರು ಚೇತರಿಸಿಕೊಂಡಿದ್ದು ಅವರಿಗೆ ಮನೆಯಲ್ಲಿ ಆರೈಕೆ ಮಾಡಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...